Advertisement
ಅವರು ಮಂಗಳವಾರ ಮಧ್ಯಾಹ್ನ ಕಲ್ಯಾಣ ಕರ್ನಾಟಕ ಅನುದಾನದಡಿ ಕೈಗೆತ್ತಿಕೊಳ್ಳಲಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
Related Articles
Advertisement
ಪಸಕ್ತ ಆರ್ಥಿಕ ವರ್ಷದಲ್ಲಿ ಮಂಡಳಿ ಅನುದಾನ ಬಳಕೆ ಮಾಡಲು ಡಿಸೆಂಬರ್ ವರೆಗೂ ಕಾಲಾವಕಾಶವಿದೆ. ಅದರೊಳಗೆ ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳುವ ಕಾಮಗಾರಿಗಳ ಕುರಿತು ಕ್ರಿಯಾಯೋಜನೆಯನ್ನು ಬೇಗನೆ ಶಾಸಕರು ಸಲ್ಲಿಸಿದರೆ ಅನುದಾನ ನೀಡಲು ಅನುಕೂಲವಾಗುವುದು ಎಂದ ಅವರು, ಈ ಬಾರಿ 5 ಸಾವಿರ ಕೋಟಿ ರೂಪಾಯಿ ಅನುದಾನ ಇದ್ದು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಈ ಭಾಗದ ಕಲ್ಯಾಣ ಮಾಡಬೇಕಾಗಿದೆ ಎಂದರು.
ಡಿಸೆಂಬರ್ ನಲ್ಲಿ ಜಯದೇವ ಲೋಕಾರ್ಪಣೆ: ಕಲ್ಯಾಣ ಕರ್ನಾಟಕದಲ್ಲಿ ಬಾರಿ ನಿರೀಕ್ಷೆ ಉಂಟು ಮಾಡಿರುವ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಡಿಸೆಂಬರ್ ಅಂತ್ಯದ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಅವರೊಂದಿಗೆ ಚರ್ಚಿಸಿ ದಿನಾಂಕವನ್ನು ನಿಗದಿ ಮಾಡಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.
ಈಗಾಗಲೇ ಶೇಕಡ 75 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮಂಡಳಿಯಿಂದ ಒಟ್ಟು 1045 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಅನುದಾನದ ಸಮರ್ಪಕ ಬಳಕೆ ಹಾಗೂ ತ್ವರಿತ ಕಾಮಗಾರಿ ಮಾಡುವ ನಿಟ್ಟಿನಲ್ಲಿ ತಾವೆಂದು ಭೇಟಿ ನೀಡಿ ವೀಕ್ಷಣೆ ಮಾಡಿದ್ದಾಗಿ ಹೇಳಿದರು. ಅದಲ್ಲದೆ ಶೀಘ್ರವೇ ಮಂಡಳಿಯಿಂದ ಗ್ರಾಮೀಣ ಮಟ್ಟದ ಜನರು ಹೃದ್ರೊಗಕ್ಕೆ ತುತ್ತಾದ ತಕ್ಷಣವೇ ಗೋಲ್ಡನ್ ಹವರ್ ನಲ್ಲಿ ಸ್ಥಳೀಯವಾಗಿ ಚಿಕಿತ್ಸೆ ನೀಡಿ ಅವರನ್ನು ಆಂಬುಲೆನ್ಸ್ ಮೂಲಕ ಜಯದೇವ ಆಸ್ಪತ್ರೆಗೆ ಕರೆತರುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.
ಶೀಘ್ರ ನೇಮಕಾತಿ: ಮಂಡಳಿಯ ಕೆಲಸ ಕಾರ್ಯಗಳು ಸಮರ್ಪಕವಾಗಿ ಕಾರ್ಯಗಳು ನಡೆಯುವ ನಿಟ್ಟಿನಲ್ಲಿ ಇಂಜಿನಿಯರ್ ಗಳ ನೇಮಕಾತಿ ಅವಶ್ಯಕತೆ ಇದೆ. ಶೀಘ್ರವೇ ಸಚಿವರು ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಭೇಟಿ ಮಾಡಿ ಚರ್ಚಿಸಿ 273 ಇಂಜಿನಿಯರ್ ಗಳ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿಕೊಡಲಾಗುವುದು. ಸದ್ಯ ಈಗ 60 ಇಂಜಿನಿಯರ್ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆಯಲ್ಲಿ ಮಂಡಳಿ ಕಾರ್ಯದರ್ಶಿ ಅನಿರುದ್ಧ ಶ್ರವಣ್, ಜಯದೇವ ಆಸ್ಪತ್ರೆಯ ಬಾಬುರಾವ್ ಹುಡುಗಿಕರ್ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು