Advertisement
1. ಉತ್ತಪ್ಪಬೇಕಾಗುವ ಸಾಮಗ್ರಿ: ಅಕ್ಕಿ- ಒಂದೂವರೆ ಕಪ್, ಉದ್ದಿನ ಬೇಳೆ- 3/4 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ.
ಮೇಲೆ ತಯಾರಿಸಿದ ಹಿಟ್ಟಿನ ಜೊತೆಗೆ, ಹೆಚ್ಚಿದ ಈರುಳ್ಳಿ, ದೊಣ್ಣೆ ಮೆಣಸಿನಕಾಯಿ, ಟೊಮೇಟೊ, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಹಸಿಮೆಣಸಿಕಾಯಿ ಸೇರಿಸಿದರೆ, ತರಕಾರಿ ಉತ್ತಪ್ಪ ರೆಡಿ.
Related Articles
ಬೇಯಿಸಿದ ಪಾಲಕ್ ಸೊಪ್ಪನ್ನು ನುಣ್ಣಗೆ ರುಬ್ಬಿ, ಹಿಟ್ಟಿನ ಜೊತೆಗೆ ಸೇರಿಸಿ. ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಚೀಸ್ ಅನ್ನು ಸೇರಿಸಿ, ಕಾವಲಿ ಮೇಲೆ ಹುಯ್ದರೆ ಪಾಲಕ್-ಚೀಸ್ ಉತ್ತಪ್ಪ ರೆಡಿ.
Advertisement
4. ಸ್ಯಾಂಡ್‌ವಿಚ್ ಉತ್ತಪ್ಪಕಾವಲಿಯ ಮೇಲೆ ಉತ್ಪಪ್ಪವನ್ನು ಹುಯ್ದು, ಅದರ ಮೇಲೆ ತೆಂಗಿನಕಾಯಿ ಚಟ್ನಿ ಸವರಿ, ವೃತ್ತಾಕಾರವಾಗಿ ಹೆಚ್ಚಿದ ಸೌತೆಕಾಯಿ, ಟೊಮೇಟೊವನ್ನು ಜೋಡಿಸಿ. ನಂತರ ಇದರ ಮೇಲೆ ಇನ್ನೊಂದು ಉತ್ತಪ್ಪವನ್ನು ಇಟ್ಟು, ಎಣ್ಣೆ ಹಚ್ಚಿ, ಎರಡೂ ಕಡೆ ಬೇಯಿಸಿ, ನಾಲ್ಕು ತುಂಡುಗಳನ್ನಾಗಿ ಮಾಡಿ, ಸಾಸ್/ ಚಟ್ನಿ ಜೊತೆಗೆ ತಿನ್ನಲು ಕೊಡಿ. 5. ಆಲೂ-ಕ್ಯಾರೆಟ್
ಉತ್ತಪ್ಪದ ಹಿಟ್ಟಿಗೆ ಆಲೂಗಡ್ಡೆ, ಕ್ಯಾರೆಟ್, ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಸೇರಿಸಿ. ಸ್ವಲ್ಪ ಚಾಟ್ ಮಸಾಲ ಪುಡಿ, ಶುಂಠಿ ತುಂಡನ್ನು ಬೆರೆಸಿ, ಕಾವಲಿ ಮೇಲೆ ಉತ್ತಪ್ಪ ಎರೆಯಿರಿ. 6. ಚಿರೋಟಿ ರವೆ
ಬೇಕಾಗುವ ಸಾಮಗ್ರಿ: ಚಿರೋಟಿ ರವೆ-1/2 ಕಪ್, ತೆಂಗಿನ ತುರಿ – 1/2 ಕಪ್, ಸಕ್ಕರೆ- 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲವನ್ನೂ ಒಟ್ಟಿಗೆ ಸೇರಿಸಿ, ಒಂದೆರಡು ಗಂಟೆಗಳ ಕಾಲ ನೀರಲ್ಲಿ ನೆನೆಸಿ. ನಂತರ, ಸ್ವಲ್ಪ ದಪ್ಪಗಿರುವಂತೆ ಉತ್ತಪ್ಪ ಹುಯ್ಯಿರಿ. ಇದನ್ನು ಚಟ್ನಿ ಹಾಗೂ ಸಾಂಬಾರ್ ಜೊತೆ ಸವಿಯಬಹುದು. 1. ಕಡಲೆ ಬೇಳೆ
ಬೇಕಾಗುವ ಸಾಮಗ್ರಿ: ಒಂದು ಹಿಡಿ ಕಡಲೆ ಬೇಳೆ, ಒಂದು ಚಮಚ ಉದ್ದಿನ ಬೇಳೆ, ಸ್ವಲ್ಪ ಎಣ್ಣೆ, 2 ಬ್ಯಾಡಗಿ ಮೆಣಸು, ಹುಣಸೆ ಹಣ್ಣು, ಚಿಕ್ಕ ಬೆಲ್ಲದ ತುಂಡು, ಒಂದು ಕಪ್ ತೆಂಗಿನತುರಿ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಬಾಣಲೆಯಲ್ಲಿ ಎರಡೂ ಬಗೆಯ ಬೇಳೆಗಳನ್ನು ಹುರಿದು, ಮೆಣಸಿನಕಾಯಿ, ಹುಣಸೆಹಣ್ಣು, ತೆಂಗಿನ ತುರಿ ಹಾಕಿ ರುಬ್ಬಿ. ನಂತರ, ಸಾಸಿವೆ- ಕರಿಬೇವು ಜೊತೆ ಒಗ್ಗರಣೆ ಕೊಡಿ. 2. ತೊಗರಿ ಬೇಳೆ
ಮೇಲಿನಂತೆ ಚಟ್ನಿ ರುಬ್ಬುವ ಮುಂಚೆ, ತೊಗರಿಬೇಳೆ ಹುರಿದು, ಅದರ ಜೊತೆ ಸೇರಿಸಿ. ಈ ಚಟ್ನಿಗೆ ವಿಶಿಷ್ಟ ಬಗೆಯ ಸುವಾಸನೆ ಇರುತ್ತದೆ. 3.ಈರುಳ್ಳಿ
ತೆಂಗಿನ ಚಟ್ನಿ ಜೊತೆಗೆ, ಹುರಿದ ಈರುಳ್ಳಿ ಸೇರಿಸಿ ರುಬ್ಬಿ, ಸಾಸಿವೆ ಒಗ್ಗರಣೆ ಕೊಡಿ. 4. ಹೀರೆ ಕಾಯಿ ಸಿಪ್ಪೆ
ಹುರಿದ ಹೀರೆಕಾಯಿ ಸಿಪ್ಪೆಯನ್ನು ತೆಂಗಿನ ತುರಿ, ಹಸಿಮೆಣಸಿನಕಾಯಿ, ಹುಣಸೆ ಹಣ್ಣಿನ ರಸದ ಜೊತೆ ಸೇರಿಸಿ ರುಬ್ಬಿ, ಸಾಸಿವೆ ಒಗ್ಗರಣೆ ಕೊಡಿ. -ಹೀರಾ ರಮಾನಂದ್