Advertisement
ಬಳಗಾನೂರು ವಿರಕ್ತಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ನಿಲೋಗಲ್‌ದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಗೌಡನಬಾವಿ ಶ್ರೀ ನಾಗಪ್ಪತಾತನವರು, ಶ್ರೀಮಠದ ಪೀಠಾಧಿಪತಿ ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹಾಗೂ ವಿವಿಧ ಮಠಗಳ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥಕ್ಕೆ ಉತ್ತತ್ತಿ, ಹಣ್ಣು, ಹೂ ತೂರಿ ನಮಿಸಿ ಜೈಘೋಷ ಕೂಗಿದರು.
Related Articles
Advertisement
ಬಂದೋಬಸ್ತ್: ಜಾತ್ರಾ ಮಹೋತ್ಸವ ನಿಮಿತ್ತ ಕವಿತಾಳ ಪಿಎಸ್‌ಐ ಅಮರೇಶ, ಬಳಗಾನೂರು ಠಾಣೆ ಪಿಎಸ್‌ಐ ಎಂ. ಶಶಿಕಾಂತ ನೇತೃತ್ವದಲ್ಲಿ ಸಿಬ್ಬಂದಿ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮ ವಹಿಸಿದ್ದರು. ಗ್ರಾಮದ ಹೊರವಲಯದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.
ಕೆಎಫ್‌ಡಿ ನಿಯಂತ್ರಣಕ್ಕೆ ಕ್ರಮಜಿಲ್ಲೆಯಲ್ಲಿ ಮಂಗನಕಾಯಿಲೆ ಉಲ್ಬಣ ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಮಂಡಳಿಯ ವತಿಯಿಂದ ಒದಗಿಸಲಾಗುವುದು. ಇದಕ್ಕಾಗಿ ಮತ್ತಷ್ಟು ಅನುದಾನ ತರಲಾಗುವುದು. ಒಟ್ಟಿನಲ್ಲಿ ಕಾಯಿಲೆ ಹತೋಟಿಗೆ ಎಲ್ಲ ರೀಠಿತಿಯ ಕಾರ್ಯಕ್ರಮಗಳನ್ನು ಮಂಗಳವಾರದಿಂದಲೇ ಆರಂಭಿಸಲಾಗುವುದು ಎಂದು ನೂತನ ಅಧ್ಯಕ್ಷರು ತಿಳಿಸಿದರು. ಮಂಡಳಿ ಕಾರ್ಯ ವ್ಯಾಪ್ತಿ
ಎಂಎಡಿಬಿಯಲ್ಲಿ ಒಟ್ಟು 137 ಸದಸ್ಯರಿದ್ದಾರೆ. ಇದರಲ್ಲಿ ಈ ವ್ಯಾಪ್ತಿಯ 12 ಲೋಕಸಭಾ ಸದಸ್ಯರು, 65 ವಿಧಾನಸಭಾ ಸದಸ್ಯರು, 23 ವಿಧಾನ ಪರಿಷತ್ ಸದಸ್ಯರು, 13 ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸರ್ಕಾರದಿಂದ ನೇಮಕಗೊಳ್ಳುವ 10 ಸದಸ್ಯರು, ಈ ವ್ಯಾಪ್ತಿಯ 10 ಜಿಲ್ಲಾಧಿಕಾರಿಗಳು ಹಾಗೂ ಮಂಡಳಿಯ ಕಾರ್ಯದರ್ಶಿ ಅವರು ಒಳಗೊಂಡಿದ್ದಾರೆ. ಮಂಡಳಿಗೆ 2018- 19 ನೇ ಸಾಲಿನಲ್ಲಿ ಸರಕಾರ 27 ಕೋಟಿ ರೂ. ಬಿಡುಗಡೆ ಮಾಡಿದೆ. ಬಾಕಿ ಅನುದಾನ ಸೇರಿದಂತೆ ಪ್ರಸ್ತುತ 52 ಕೋಟಿ ರೂ. ಮಂಡಳಿಯಲ್ಲಿ ಲಭ್ಯವಿದೆ.