Advertisement

ಸಾಮಾಜಿಕ ಜಾಲತಾಣ ದುರುಪಯೋಗ ಮಾಡಿಕೊಳ್ಳಬೇಡಿ

11:11 AM Nov 26, 2018 | |

ಸುರಪುರ: ಇತ್ತೀಚೆಗೆ ಯುವಕರು ಸಾಮಾಜಿಕ ಜಾಲತಾಣಗಳನ್ನು ಉಪಯೋಗಕ್ಕಿಂತ ದುರುಪಯೋಗ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ಕೋಮು ಸೌಹಾರ್ಧ ವೇದಿಕೆ ತಾಲೂಕು ಸಂಚಾಲಕ ಮಲ್ಲಯ್ಯ ಕಮತಗಿ ತಿಳಿಸಿದರು.

Advertisement

ನಗರದ ಟೇಲರ್‌ ಮಂಜಿಲ್‌ನಲ್ಲಿ ಕರ್ನಾಟಕ ಕೋಮು ಸೌಹಾರ್ಧ ವೇದಿಕೆ ಹಾಗೂ ಕನ್ನಡ ಬಹುತ್ವ ಭೂಮಿಕೆ ವತಿಯಿಂದ ರವಿವಾರ ಆಯೋಜಿಸಲಾಗಿದ್ದ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.

ದಲಿತ ಸಮುದಾಯಗಳ ಕುರಿತು ಅಶ್ಲೀಲ ಪದ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಮೂಲಕ ತಾಲೂಕಿನಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿರುವುದು ಖೇದನೀಯ. ಇಂತಹ ಕ್ಷುಲಕ ವಿಷಯಗಳಿಗೆ ಯಾವುದೇ ಸಮುದಾಯದ ಮುಖಂಡರು ಹಾಗೂ ಜನಸಮುದಾಯ ಕಿವಿಗೊಡಬಾರದು ಎಂದು ಮನವಿ ಮಾಡಿದರು ಕಳೆದ ಕೆಲ ದಿನಗಳಿಂದ ದಲಿತ ಸಮುದಾಯಗಳ ನಡುವೆ ಪರಸ್ಪರ ಅಶ್ಲೀಲವಾಗಿ ನಿಂದಿಸುವ ಆಡಿಯೋಗಳು ನಿರಂತರವಾಗಿ ನಡೆಯುತ್ತಿವೆ. 

ಇದು ಒಳ್ಳೆ ಬೆಳವಣಿಗೆ ಅಲ್ಲ. ಇದು ಯಾವುದೋ ಕಿಡಿಗೇಡಿಗಳು ಮಾಡುವ ಕ್ಷುಲಕ ವಿಷಯಕ್ಕೆ ಪ್ರಜ್ಞಾವಂತರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಂತಹ ವಿಡಿಯೋಗಳು ವೈರಲ್‌ ಆಗುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಿತರಾಗಿ ಕಿಡಿಗೇಡಿಗಳ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಕೋರಿದರು ಎಲ್ಲ ಜಾತಿ ಧರ್ಮಗಳನ್ನು ಸಮಾನವಾಗಿ ಕಂಡಿರುವ ಐತಿಹಾಸಿಕವಾಗಿ ರಾಜ ಪರಂಪರೆ ಉಳ್ಳ ಕ್ಷೇತ್ರ ನಮ್ಮದು. ತಿಂಥಣಿ ಮೌನೇಶ್ವರ, ಕೊಡೇಕಲ್ಲ ಬಸವಣ್ಣ, ಮುದನೂರಿನ ಜೇಡರ ದಾಸಿಮಯ್ಯ, ಆನಂದ ದಾಸರು, ಹೆಗ್ಗಣದೊಡ್ಡಿಯ ಭಾಗಸವಾರ ಸೇರಿದಂತೆ ಅನೇಕ ಶರಣ ಸಂತರ ಕರ್ಮಭೂಮಿ ನಮ್ಮದು.

 ಇಂತಹ ಸೌರ್ಹಾದ ವಾತಾವರಣವಿರುವ ಕ್ಷೇತದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿರುವುದು ದುರಂತದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ನಮ್ಮ ತಾಲೂಕಿನಲ್ಲಿ ಇದುವರೆಗೂ ಕೋಮು ಸಂಘರ್ಷ ಉಂಟಾಗಿಲ್ಲ. ಇಲ್ಲಿ ಇದುವರೆಗೂ ಅಧಿಕಾರಕ್ಕೆ ಬಂದಿರುವ ಜನಪ್ರತಿನಿಧಿಗಳು ಎಲ್ಲ ಸಮುದಾಯಗಳನ್ನು ಪ್ರೀತಿ ವಿಶ್ವಾಸದಿಂದ ಕಂಡಿದ್ದಾರೆ. ಎಲ್ಲರಿಗೂ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದ್ದಾರೆ. ಯಾವುದೋ ಕಿಡಿಗೇಡಿಗಳ ಮಾತಿಗೆ ಮನಸು ಕೆಡಿಸಿಕೊಳ್ಳುವುದು ಬೇಡ. ಎಲ್ಲ ಜಾತಿ ಜನಾಂಗ ಸಹೋದರತ್ವದಿಂದ ಬಾಳ್ಳೋಣ. ಎಲ್ಲ ಜಾತಿ ಜನಾಂಗ ಸೇರಿ ಕಿಡಿಗೇಡಿಗಳ ವಿರುದ್ದ ಕಾನೂನಾತ್ಮಕ ಕ್ರಮಕ್ಕೆ ಒತ್ತಾಯೊಸೋಣ ಎಂದು ಹೇಳಿದರು.

Advertisement

ಕನ್ನಡ ಬಹುತ್ವ ಭೂಮಿಕೆಯ ಸಿದ್ದಯ್ಯಸ್ವಾಮಿ ಸ್ಥಾವರಮಠ ಮಾತನಾಡಿ, ಭಾವೈಕ್ಯತೆಯಲ್ಲಿ ನಮ್ಮ ಸಗರನಾಡು ದೇಶಕ್ಕೆ ಮಾದರಿಯಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗುವುದು ಅತ್ಯಗತ್ಯವಾಗಿದೆ. ತಾಲೂಕಿನ ಎಲ್ಲ ಸಮುದಾಯಗಳ ಮುಖಂಡರು ಚಿಂತನ ಮಂಥನ ಮಾಡಿ ಶಾಂತಿ ಸೌರ್ಹಾದತೆ ಕಾಪಾಡಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಮುಖಂಡರಾದ ಐಮದ್‌ ಪಠಾಣ, ಬಲಭೀಮ ನಾಯಕ ದೇಸಾಯಿ ಇದ್ದರು. 

ಸಿಐಟಿಯು ಮುಖಂಡ
ದೇವಿಂದ್ರಪ್ಪ ಪತ್ತಾರ ಮಾತನಾಡಿ, ಅಶ್ಲೀಲ ಆಡಿಯೋಗಳ ವೈರಲ್‌ನಿಂದ ತಾಲೂಕಿನಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತಿದೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ನಿರ್ಲಕ್ಷ್ಯಾ ವಹಿಸಿದಲ್ಲಿ ಇದು ಕೋಮು ಸಂಘರ್ಷಕ್ಕೆ ಹಾದಿಯಾಗಬಹುದು.

ಆದ್ದರಿಂದ ಪೊಲೀಸ್‌ ವರಿಷ್ಠಾಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಪೊಲೀಸ್‌ ಠಾಣೆಯಲ್ಲಿ ಎಲ್ಲ ಜಾತಿ ಜನಾಂಗದ ಸಭೆ ಕರೆದು ಶಾಂತಿ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next