Advertisement

ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಪುತ್ರ ಜಮೀನ್‌ ಖಾನ್‌ ನಿಧನ

03:10 PM Feb 10, 2018 | udayavani editorial |

ವಾರಾಣಸಿ, ಉತ್ತರ ಪ್ರದೇಶ : ಶೆಹನಾಯ್‌ ಮಾಂತ್ರಿಕ ಉಸ್ತಾದ್‌ ಬಿಸ್ಮಿಲ್ಲಾ  ಖಾನ್‌ ಅವರ ಮೂರನೇ ಪುತ್ರ ಜಮೀನ್‌ ಹುಸೇನ್‌ ಖಾನ್‌ ಅವರಿಂದು ನಿಧನಹೊಂದಿದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

Advertisement

ಜಮೀನ್‌  ಅವರು ಕಿಡ್ನಿ ವೈಫ‌ಲ್ಯದಿಂದ ಬಳಲುತ್ತಿದ್ದರು. ಇಂದು ನಸುಕಿನ ವೇಳೆ ಅವರು ನಗರದ ಕಾಳೀ ಮಹಲ್‌ ಪ್ರದೇಶದಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ಅವರು ಐವರು ಪುತ್ರಿಯರು, ಒಬ್ಬ ಪುತ್ರ ಅಫ‌ಕ್‌ ಹೈದರ್‌ ಅವರನ್ನು ಅಗಲಿದ್ದಾರೆ. ಈಗಿನ್ನು  ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರು ಶೆಹನಾಯ್‌ ಬಳುವಳಿಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ಅಫ‌ಕ್‌ ಹೈದರ್‌ ಅವರ ಹೆಗಲಿಗೆ ಬಿದ್ದಿದೆ. 

ಜಮೀನ್‌ ಅವರ ಪಾರ್ಥಿವ ಶರೀರವನ್ನು ಫ‌ತ್ಮಾನ್‌ ದರ್ಗಾದಲ್ಲಿನ ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರ ಗೋರಿಯ ಸಮೀಪವೇ ದಫ‌ನ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next