“ಉಸಿರೇ ಉಸಿರೇ’ ಎಂಬ ಚಿತ್ರವೊಂದರ ಬಗ್ಗೆ ನೀವು ಕೇಳಿರಬಹುದು. ರಾಜೀವ್ ನಾಯಕರಾಗಿರುವ ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಆದರೆ, ಸಿನಿಮಾದ ನಿರ್ದೇಶಕರು ಮಾತ್ರ “ಕಾಣೆಯಾಗಿದ್ದಾರೆ’!
ಹೌದು, ಹೀಗೊಂದು ಆರೋಪದೊಂದಿಗೆ ಮಾಧ್ಯಮ ಮುಂದೆ ಬಂದು ಕಣ್ಣೀರು ಹಾಕಿದ್ದು ಚಿತ್ರದ ನಿರ್ಮಾಪಕ ಪ್ರದೀಪ್ ಯಾದವ್. ಅಂದಹಾಗೆ ಸಿ.ಎಂ.ವಿಜಯ್ ಈ ಸಿನಿಮಾದ ನಿರ್ದೇಶಕರು.
“ನಾನು ಹೊಸ ನಿರ್ದೇಶಕನನ್ನು ನಂಬಿ ಅವಕಾಶ ಕೊಟ್ಟೆ. ಆದರೆ, ಈಗ ಆತನ ಸಿನಿಮಾವನ್ನು ಅರ್ಧಕ್ಕೆ ಬಿಟ್ಟು ಕಾಣೆಯಾಗಿದ್ದಾನೆ. ಹೇಳಿದ್ದಾನೆ ಗೊತ್ತಿಲ್ಲ. ಫೋನ್ ಸ್ವಿಚ್ ಆಫ್, ಮನೆ ಬೇರೆ ಖಾಲಿ ಮಾಡಿದ್ದಾನೆ. ಹೀಗಾದರೆ ನಮ್ಮಂತಹ ನಿರ್ಮಾಪಕರ ಗತಿಯೇನು. ಆತನನ್ನು ನಂಬಿಕೊಂಡು ಆರು ಕೋಟಿ ರೂಪಾಯಿ ಹಣ ಹಾಕಿದ್ದೇನೆ. ಹೊಸಬರನ್ನು ನಂಬಿ ಅವಕಾಶ ಕೊಡೋದೇ ತಪ್ಪಾ. ಕೊಟ್ಟ ಬಜೆಟ್ ನಲ್ಲಿ ಸಿನಿಮಾಕ್ಕೆ ಬಳಕೆ ಮಾಡಿದ್ದಕ್ಕಿಂತ ಆತನ ವೈಯಕ್ತಿಕಕ್ಕೆ ಬಳಕೆ ಮಾಡಿದ್ದೇ ಹೆಚ್ಚು. ಇವತ್ತು ಸಿನಿಮಾ ಇಷ್ಟೊಂದು ತಡವಾಗಲು ಕಾರಣ ಕೂಡಾ ಆ ನಿರ್ದೇಶಕ. ಒಂದು ಶೆಡ್ನೂಲ್ ಮುಗಿಸಿ, ಮತ್ತೂಂದು ಶೆಡ್ನೂಲ್ ಮಾಡುವ ಎಂದರೆ, “ನನಗೆ ಮೂಡ್ ಇಲ್ಲ’ ಎಂದು ಆರು ತಿಂಗಳು ಕಾಯಿಸುತ್ತಿದ್ದ. ಇವತ್ತು ನಾನು ಬೀದಿಗೆ ಬರುವ ಪರಿಸ್ಥಿತಿ ಬಂದಿದೆ’ ಎಂದು ಮಾಧ್ಯಮ ಮುಂದೆ ಕಣ್ಣೀರು ಹಾಕಿದರು ನಿರ್ಮಾಪಕ ಪ್ರದೀಪ್.
ಅಂದಹಾಗೆ, ನಿರ್ಮಾಪಕರು ಸಹಾಯಕ ನಿರ್ದೇಶಕರ ಸಹಾಯ ಪಡೆದು ಈಗ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಚಿತ್ರ ಮೇ 3ರಂದು ತೆರೆಕಾಣುತ್ತಿದೆ.