Advertisement

AI Health: ಕ್ಯಾನ್ಸರ್‌ ಪತ್ತೆಗೆ ಎಐ ಬಳಕೆ

08:28 PM Dec 12, 2023 | Pranav MS |

ಮಾರಕ ಕಾಯಿಲೆ ಎಂದೇ ಪರಿಗಣಿಸಿರುವ ಕ್ಯಾನ್ಸರ್‌ ಪತ್ತೆಗೆ ಅಮೆರಿಕದ ಸಂಶೋಧಕರು ಎಐ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾರೆ. ಅಮೆರಿಕದ ಟೆಕ್ಸಾಸ್‌ನ ಸೌತ್‌ವೆಸ್ಟರ್ನ್ ಮೆಡಿಕಲ್‌ ಕಾಲೇಜಿನ ಸಂಶೋಧಕರು ಸಿಯೋಗ್ರಾಫ್ ಎನ್ನುವ ಎಐ ತಂತ್ರಜ್ಞಾನ ಒಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಕ್ಯಾನ್ಸರ್‌ ರೋಗಿಗಳ ಟಿಶ್ಯೂ ಮಾದರಿಗಳನ್ನು ಪರೀಕ್ಷಿಸಿ ಅವರಿಗೆ ಕ್ಯಾನ್ಸರ್‌ ಇದೆಯೋ ಇಲ್ಲವೋ ಎಂಬುದನ್ನು ಪತ್ತೆಹಚ್ಚುತ್ತದೆ. ಅಲ್ಲದೆ, ಜೀವಕೋಶದ ವ್ಯವಸ್ಥೆ, ಅವುಗಳ ಕ್ರಿಯೆ, ಬದಲಾವಣೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ಖಾಯಿಲೆ ಯಾವ ಹಂತದಲ್ಲಿದೆ ಎಂಬುದನ್ನೂ ಪತ್ತೆಹಚ್ಚಬಲ್ಲದ್ದಾಗಿದೆ.

Advertisement

ಇದರಿಂದ ರೋಗಿಗಳಿಗೆ ನೀಡುವ ಚಿಕಿತ್ಸೆಗೆ ಸಹಕಾರಿಯಾಗಲಿದ್ದು, ಈಗಾಗಲೇ ಈ ತಂತ್ರಜ್ಞಾನ ಬಳಸಿ ನಡೆಸಿದ 3 ಹಂತದ ಪ್ರಾಯೋಗಿಕ ಕ್ಲಿನಿಕಲ್‌ ಪರೀಕ್ಷೆಗಳು ಯಶಸ್ವಿಯಾಗಿವೆ. ಶೀಘ್ರವೇ ಅಧಿಕೃತವಾಗಿ ಇದರ ಬಳಕೆಯೂ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next