Advertisement

ಬೊಜ್ಜು ಕರಗಿಸುವ “ಜೀರಿಗೆ”ಆರೋಗ್ಯ ಸಂಜೀವಿನಿ

06:28 PM Jan 29, 2021 | Team Udayavani |

ನವದೆಹಲಿ: ಜೀರಿಗೆ ಎಲ್ಲರಿಗೂ ತಿಳಿದಿರುವಂತೆ ಒಂದು ಸಾಂಬಾರು ಪದಾರ್ಥ. ಹಿಂದಿನ ಕಾಲದಿಂದಲೂ ಜೀರಿಗೆಯನ್ನು ಹಲವು ಆಹಾರಗಳಲ್ಲಿ ಬಳಸಿಕೊಂಡು ಬಂದಿದ್ದಾರೆ. ಪ್ರಾಚೀನ ಈಜಿಪ್ಟ್ ಜನರು ಮಾಂಸಾಹಾರಿ ಆಹಾರ ತಯಾರಿಕೆಯಲ್ಲಿ ಜೀರಿಗೆಯನ್ನು ಬಳಸುತ್ತಿದ್ದರಂತೆ. ಇಂತಹ ಜೀರಿಗೆ ಕೇವಲ ಸಾಂಬಾರಿನ ರುಚಿ ಹೆಚ್ಚಿಸುವುದಷ್ಟೇ ಅಲ್ಲದೆ ಹಲವು ಆರೋಗ್ಯ ಸಮಸ್ಯೆಗಳಿಗೂ ರಾಮಬಾಣವಾಗಿದೆ.

Advertisement

ಬೊಜ್ಜು ಕರಗಿಸುತ್ತದೆ

ಪ್ರತಿನಿತ್ಯ ರಾತ್ರಿ ನೀರಿನಲ್ಲಿ ಜೀರಿಗೆಯನ್ನು ನೆನೆಸಿ ಬೆಳಿಗ್ಗೆ ಎದ್ದ ತಕ್ಷಣ ಮೊದಲು ಜೀರಿಗೆ ನೀರು ಕುಡಿಯುವುದರಿಂದಾಗಿ ದೇಹದಲ್ಲಿನ ಬೊಜ್ಜು ಕರಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ವ್ಯಾಯಾಮದ ಮೊದಲು ಹಾಗೂ ವ್ಯಾಯಾಮದ ನಂತರ ನಿಯಮಿತ ಪ್ರಮಾಣದ ಜೀರಿಗೆ ನೀರನ್ನು ಸೇವನೆ ಮಾಡುವುದರಿಂದ ದೇಹದ  ತೂಕ ನಿಯಂತ್ರಣಕ್ಕೆ ಬರುತ್ತದೆ ಅಲ್ಲದೆ ಮುಖ್ಯವಾಗಿ ಸೊಂಟದಲ್ಲಿ ಶೇಖರಣೆಯಾಗುವ ಬೊಜ್ಜನ್ನು ಇದು ಕರಗಿಸುತ್ತದೆ.

ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ

ಜೀರಿಗೆಯಲ್ಲಿ ಥೈಮೋಲ್ ಎಂಬ ಅಂಶವಿದ್ದು ಇದು ಜಠರ ದ ಗ್ರಂಥಿಗಳ ಶ್ರವಿಸುವಿಕೆಯನ್ನು ಉತ್ತೇಜಿರುತ್ತದೆ. ಆ ಮೂಲಕ ಅತಿಸಾರ, ವಾಕರಿಕೆ, ಅಜೀರ್ಣದಂತಹ ಸಮಸ್ಯೆಗಳ ನಿವಾರಣೆಯಲ್ಲಿ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.

Advertisement

ಹೊಟ್ಟೆಯುಬ್ಬರವನ್ನು ನಿವಾರಿಸುತ್ತದೆ

ಹಲವರಲ್ಲಿ ಕಂಡುಬರುವ ಹೊಟ್ಟೆಯುಬ್ಬರ ಸಮಸ್ಯೆಯನ್ನು ನೀವಾರಿಸುವಲ್ಲಿ ಜೀರಿಗೆ ಉತ್ತಮ ಪಾತ್ರವನ್ನು ವಹಿಸುತ್ತದೆ. ಹೊಟ್ಟೆಯುಬ್ಬರದ ಸಮಸ್ಯೆ ಇರುವವರು ಪ್ರತಿ ನಿತ್ಯ ಜೀರಿಗೆಯನ್ನು ತಿನ್ನುವುದರಿಂದ ಹಾಗೂ ಜೀರಿಗೆ ನೀರನ್ನು ಸೇವಿಸುವುದರಿಂದ ತಮ್ಮ ಹೊಟ್ಟೆಯುಬ್ಬರದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಗಲಭೆ ಮಾಡಲು ಹುನ್ನಾರ: ಮಾಯಾ ಗ್ಯಾಂಗ್ ಜೊತೆ ಇದೀಗ ‘ಕಾರ್ಖಾನಾ’ ಗ್ಯಾಂಗ್ ಬಂಧನ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಜೀರಿಗೆಯಲ್ಲಿ ಕಂಡುಬರುವ ವಿಟಮಿನ್ ಎ ಹಾಗೂ ಸಿ ಅಂಶಗಳು  ಆ್ಯಂಟಿ ಆಕ್ಸಿಡೆಂಟ್ ಅಂಶಗಳಾಗಿದ್ದು, ಇವುಗಳು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹಾಗೂ ಕ್ಯಾನ್ಸರ್ ಕಾರಕ ಕಣಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಅತಿಸೂಕ್ಷ್ಮ ಕ್ರಿಮಿನಾಶಕ  ಅಂಶಗಳಿದ್ದು, ಇವುಗಳು ಹಲವು ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ.

ರಕ್ತಶುದ್ಧಿಕರಣ

ಪ್ರತಿನಿತ್ಯ ಜೀರಿಗೆಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವಲ್ಲಿ ಸಹಕಾರಿಯಾಗುತ್ತದೆ ಮತ್ತು ರಕ್ತವನ್ನು ಶುದ್ಧಿಕರಿಸುವಲ್ಲಿಯೂ ಇದು ಉತ್ತಮ ಪಾತ್ರ ವಹಿಸುತ್ತದೆ. ಜೀರಿಗೆಯ ಕುರಿತಾಗಿ ಹಲವಾರು ಸಂಶೋಧನೆಗಳು ನಡೆಯುತ್ತಿದ್ದು, ಜೀರಿಗೆ ದೇಹದಲ್ಲಿ ಬಿಳಿರಕ್ತಕಣಗಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next