Advertisement

ಬರಲಿದೆ “ಯೂಸರ್‌ ಡೇಟಾ’ವ್ಯವಸ್ಥೆ 

03:23 PM Sep 03, 2021 | Team Udayavani |

ಹೊಸದಿಲ್ಲಿ: ಭಾರತದ ಎಲ್ಲ ಉದ್ಯಮಗಳು, ಬ್ಯಾಂಕುಗಳು, ವಿಮಾ ಕಂಪೆನಿಗಳು, ವಿವಿಧ ಹಣಕಾಸು ಸಂಸ್ಥೆಗಳು ಹಾಗೂ ಅವರ ಗ್ರಾಹಕರನ್ನು ಪರಸ್ಪರ ಬೆಸೆಯುವಂಥ ವಿಶೇಷವಾದ   ನೆಟ್‌ವರ್ಕ್‌ ಒಂದನ್ನು ರೂಪಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ.

Advertisement

ಇದೊಂದು ದತ್ತಾಂಶ ಹಂಚಿಕೆಯ (ಡೇಟಾ ಶೇರಿಂಗ್‌) ವ್ಯವಸ್ಥೆಯಾಗಿರಲಿದ್ದು, ಉದ್ಯಮಿಗಳಿಗೆ ಹಾಗೂ ಲಕ್ಷಾಂತರ ಗ್ರಾಹಕರಿಗೆ ಉದ್ದಿಮೆ ಸಾಲ, ವೈಯಕ್ತಿಕ ಸಾಲ ಸೌಲಭ್ಯ ನೀಡುವಾಗ ವಿವಿಧ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಅರ್ಜಿದಾರನ ಅರ್ಹತೆಯನ್ನು ಸುಲಭವಾಗಿ ಅಳೆಯಲು ಸಾಧ್ಯವಾಗುತ್ತದೆ.  ಉದಾಹರಣೆಗೆ, ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾತನ ಆದಾಯ ಮೂಲಗಳು, ಆತ ಪಾವತಿಸುವ ತೆರಿಗೆ, ಆತನ ಖರ್ಚು ವೆಚ್ಚಗಳು, ಈಗಾಗಲೇ ಆತನ ಮೇಲೆ ಇರಬಹುದಾದ ಸಾಲದ ಮೊತ್ತ, ಆತ ಕಟ್ಟುತ್ತಿರುವ ವಿಮಾ ಕಂತುಗಳು ಸೇರಿದಂತೆ ಅನೇಕ ಮಾಹಿತಿಗಳನ್ನು ಈ ಜಾಲದಡಿ, ಒಂದು ಸಂಸ್ಥೆಯಿಂದ ಮತ್ತೂಂದು ಸಂಸ್ಥೆಗೆ ಸುಲಭವಾಗಿ ರವಾನಿಸಬಹುದಾಗಿದೆ. ಇದರಿಂದಾಗಿ, ಸಾಲ ಅರ್ಜಿ ವಿಲೇವಾರಿ ಮುಂತಾದ ಆರ್ಥಿಕ ಚಟುವಟಿಕೆಗಳು ತ್ವರಿತವಾಗಿ ಸಾಗುವುದಲ್ಲದೆ, ಬಂಡವಾಳ ಆಕರ್ಷಣೆಗೂ ಇದು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಪರಿಕಲ್ಪನೆಯ ಸಾಕಾರಕ್ಕಾಗಿ, ಈಗಾಗಲೇ ದೇಶದ ಎಲ್ಲ ಬ್ಯಾಂಕ್‌ ಗಳು, ಪಿಂಚಣಿ ನಿಧಿದಾರರು, ತೆರಿಗೆ ನಿರ್ಧರಿಸುವ ಸರಕಾರಿ ಸಂಸ್ಥೆಗಳು, ವಿಮಾದಾರರು ಹಾಗೂ ಎಲ್ಲ ವಾಣಿಜ್ಯ ವ್ಯವಹಾರಗಳ ಕಂಪೆನಿಗಳನ್ನು ಸಂಪರ್ಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next