Advertisement

ರೋಗ ನಿರೋಧಕ-ಕರಿಬೇವು

08:41 PM Sep 22, 2020 | Suhan S |

ಅಡುಗೆಯ ರುಚಿ ಮತ್ತು ಸುವಾಸನೆ ಹೆಚ್ಚಿಸಲು ಬಳಕೆಯಾಗುವ ವಸ್ತುಗಳ ಪೈಕಿ ಕರಿಬೇವಿಗೆ ಪ್ರಮುಖ ಸ್ಥಾನವಿದೆ. ಸಾರು ಹೆಚ್ಚು ರುಚಿಯಾಗಿ ಇರಬೇಕೆಂದರೆ, ಅದಕ್ಕೆ ಕರಿಬೇವಿನ ಒಗ್ಗರಣೆ ಇರಲೇಬೇಕು. ಎಷ್ಟೋ ಜನಊಟಕ್ಕೆಕುಳಿತಾಗ- “ಒಗ್ಗರಣೆಗೆ ಕರಿಬೇವಿನ ಸೊಪ್ಪು ಹಾಕೇ ಇಲ್ಲ, ಹಾಗಾಗಿ ಸಾರು ರುಚಿಯಾಗಿಲ್ಲ’ ಅನ್ನುವುದುಂಟು. ಕರಿಬೇವಿನ ಒಗ್ಗರಣೆಯಿಂದಾಗಿ ಚಟ್ನಿಯ ರುಚಿ ಹೆಚ್ಚಿದೆ ಅನ್ನುವ ಜನರೂ ಉಂಟು. ಕರಿಬೇವಿನ ಮಹತ್ವ ತಿಳಿಯಲು ಇಷ್ಟೇ ಪೀಠಿಕೆ ಸಾಕು.

Advertisement

ಅಡುಗೆಯ ರುಚಿಯನ್ನು ಹೆಚ್ಚಿಸುವುದಕ್ಕೆ ಮಾತ್ರವಲ್ಲ; ರೋಗನಿರೋಧಕವಾಗಿಯೂ ಕರಿಬೇವಿನ ಸೊಪ್ಪು ಬಳಕೆಯಾಗುತ್ತದೆ. ಆಯುರ್ವೇದ ವೈದ್ಯಪದ್ಧತಿಯಲ್ಲಿಕರಿಬೇವು ಸೊಪ್ಪಿನ ಬಳಕೆಗೆ ಪ್ರಾಶಸ್ತ್ಯ ನೀಡಲಾಗಿದೆ.ಕರಿ ಬೇವಿನಲ್ಲಿ ವಿಟಮಿನ್‌ “ಸಿ’ ಮತ್ತು ಬೀಟಾ- ಕ್ಯಾರೋಟಿನ್‌ ಅಂಶಗಳಿರುವ ಕಾರಣ, ಹಲವಾರುಕಾಯಿಲೆಗಳಿಗೆ ಇದನ್ನು ಮನೆಮದ್ದಾಗಿ ಬಳಸಲಾಗುತ್ತದೆ. ಆಹಾರದಲ್ಲಿಕರಿಬೇವನ್ನು ಹೆಚ್ಚಾಗಿ ಬಳಸುವುದರಿಂದ ಸೋಂಕುಗಳು, ಉರಿಯೂತದ ಲಕ್ಷಣಗಳು ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಾಧ್ಯವಿದೆ.

ಕರಿಬೇವಿನಲ್ಲಿ ನಾರಿನ ಅಂಶ ಹೇರಳವಾಗಿದ್ದು, ಆ ಕಾರಣದಿಂದ ಮನುಷ್ಯನ ದೇಹದಲ್ಲಿ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇನ್ಸುಲಿನ್‌ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಯಾವಾಗ ಮನುಷ್ಯನ ದೇಹ ಇನ್ಸುಲಿನ್‌ ಅಂಶವನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸಲು ಮುಂದಾದಾಗ, ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಕಂಟ್ರೋಲ್‌ ಗೆ ಬರುತ್ತದೆ. ದಿನವೂ ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ 8-10 ತಾಜಾಕರಿಬೇವಿನ ಎಲೆಗಳನ್ನು ಜಿಗಿದು ತಿನ್ನುವುದು ಅಥವಾ ಕರಿಬೇವಿನ ಎಲೆಗಳ ಜ್ಯೂಸ್‌

ತಯಾರಿಸಿಕೊಂಡುಕುಡಿಯುವ ಅಭ್ಯಾಸ ಒಳ್ಳೆಯದು. ಇದರಜೊತೆಗೆ ಪಲ್ಯಗಳು, ರೈಸ್‌ ಬಾತ್‌ ಗಳು, ಸಾರು, ಸಾಗು ಮತ್ತು ಸಲಾಡ್‌ ಗಳು, ಹೀಗೆ ದಿನನಿತ್ಯದ ಅಡುಗೆಗಳಲ್ಲಿ ಕರಿಬೇವಿನ ಸೊಪ್ಪನ್ನು ತಪ್ಪದೆ ಬಳಸಿದರೆ, ಅಡುಗೆಯ ರುಚಿಯೂ ಹೆಚ್ಚುತ್ತದೆ. ಆರೋಗ್ಯವೂ ಸುಧಾರಿಸುತ್ತದೆ.­

Advertisement

Udayavani is now on Telegram. Click here to join our channel and stay updated with the latest news.

Next