Advertisement

ನೀರನ್ನು ಹಿತವಾಗಿ, ಮಿತವಾಗಿ ಬಳಸಿ

09:05 AM May 19, 2019 | mahesh |

ನವದೆಹಲಿ: ಬೇಸಿಗೆಯಿಂದಾಗಿ ದೇಶದ ಪ್ರಮುಖ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಮಟ್ಟ ಶೋಚನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ನೀರನ್ನು ಹಿತವಾಗಿ, ಮಿತವಾಗಿ ಬಳಸುವಂತೆ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಕಿವಿಮಾತು ಹೇಳಿದೆ. ಬರದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಈ ಸೂಚನೆಯುಳ್ಳ ಸಲಹಾ ಪತ್ರವನ್ನು ರವಾನಿಸಿರುವ ಕೇಂದ್ರ ಸರ್ಕಾರ, ಅದರ
ಪ್ರತಿಯನ್ನು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳಿಗೂ ಕಳುಹಿಸಿದೆ. ಮುಂಗಾರು ಆರಂಭಗೊಂಡು ಜಲಾಶಯಗಳು ಭರ್ತಿಯಾಗುವವರೆಗೂ ಈಗ ಲಭ್ಯವಿರುವ ನೀರನ್ನು ಕೇವಲ ಕುಡಿಯುವುದಕ್ಕಾಗಿ ಬಳಸುವಂತೆ ಕೇಂದ್ರ ತನ್ನ ಸಲಹೆಯಲ್ಲಿ ಕಟ್ಟುನಿಟ್ಟಾಗಿ ಸೂಚಿಸಿದೆ.

Advertisement

ಬೇಸಿಗೆ ಕಾಲದಲ್ಲಿ ಕಳೆದ 10 ವರ್ಷಗಳಿಂದ ಜಲಾಶಯಗಳಲ್ಲಿ ನಿಲ್ಲುತ್ತಿದ್ದ ಸರಾಸರಿ ನೀರಿನ ಮಟ್ಟಕ್ಕಿಂತ
ಈ ಬಾರಿ ಶೇ. 20ರಷ್ಟು ಕುಸಿತ ಕಂಡುಬಂದಿರುವುದರಿಂದ ರಾಜ್ಯ ಸರ್ಕಾರಗಳಿಗೆ ಇಂಥದ್ದೊಂದು ಸಲಹೆಯನ್ನು ಕೇಂದ್ರ ರವಾನಿಸಿದೆ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲೂಸಿ) ಸದಸ್ಯ ಎಸ್‌.ಕೆ. ಹಲ್ದಾರ್‌ ತಿಳಿಸಿದ್ದಾರೆ.

ಕೇಂದ್ರದ ಕಳಕಳಿಗೆ ಕಾರಣವೇನು?: ದೇಶದ 91 ಪ್ರಮುಖ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟದ ಮೇಲೆ
ಸಿಡಬ್ಲೂéಸಿ ಯಾವಾಗಲೂ ಕಣ್ಣಿಟ್ಟಿರುತ್ತದೆ. ಈ 91 ಜಲಾಶಯಗಳ ಒಟ್ಟಾರೆ ಜಲ ಸಾಮರ್ಥ್ಯ 161.993
ಬಿಲಿಯನ್‌ ಕ್ಯೂಬಿಕ್‌ ಮೀಟರ್‌ (ಬಿಸಿಎಂ) ಆಗಿದ್ದು, ಸದ್ಯಕ್ಕೆ ಇವುಗಳಲ್ಲಿ 35.99 ಬಿಸಿಎಂಗಳಷ್ಟು ನೀರು ಲಭ್ಯವಿದೆ. ಅಂದರೆ, ಒಟ್ಟಾರೆ ಸಾಮರ್ಥ್ಯಕ್ಕೆ ಹೋಲಿಸಿದರೆ ಇದು ಶೇ. 22ರಷ್ಟು ಮಾತ್ರ.

ದಕ್ಷಿಣದಲ್ಲಿ ಹೇಗಿದೆ “ಜಲ ಜಂಜಾಟ’?: ದಕ್ಷಿಣ ಭಾರತದ ಬಗ್ಗೆ ಹೇಳುವುದಾದರೆ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಒಟ್ಟಾರೆ 31 ಜಲಾಗಾರಗಳಿದ್ದು, ಇವುಗಳ ಒಟ್ಟು ಸಾಮರ್ಥ್ಯ 51.59 ಬಿಸಿಎಂನಷ್ಟಿದೆ. ಸದ್ಯಕ್ಕೆ ಈ ಎಲ್ಲಾ ಜಲಾಶಯಗಳಲ್ಲಿ 6.86 ಬಿಸಿಎಂನಷ್ಟು ನೀರು ಮಾತ್ರ ಲಭ್ಯ
ವಿದ್ದು, ಒಟ್ಟಾರೆ ಸಾಮರ್ಥ್ಯಕ್ಕೆ ಹೋಲಿಸಿದರೆ ಇದು ಶೇ.13 ರಷ್ಟು ಮಾತ್ರ. ಕಳೆದ ವರ್ಷವೂ ಈ ವೇಳೆಗೆ ಇಷ್ಟೇ ನೀರು ಲಭ್ಯವಿತ್ತು. ಆದರೆ, 10 ವರ್ಷಗಳ ಸರಾಸರಿ ಲೆಕ್ಕ ತೆಗೆದು ಕೊಂಡಾಗ ಇಲ್ಲಿ ಶೇ. 16ರಷ್ಟು ನೀರು ಲಭ್ಯವಿರುತ್ತಿದ್ದು, ಈ ಬಾರಿ ಶೇ. 3ರಷ್ಟು ಕೊರತೆಯಾಗಿದೆ.

31 ಕೇಂದ್ರದ ಅವಗಾಹನೆಯಲ್ಲಿ ಇರುವ ದಕ್ಷಿಣ ಭಾರತದ ಪ್ರಮುಖ ಅಣೆಕಟ್ಟುಗಳು
51.59ಬಿಸಿಎಂ ಜಲಾಶಯಗಳು ಹೊಂದಿರುವ ಒಟ್ಟಾರೆ ನೀರಿನ ಸಾಮರ್ಥ್ಯ
6.86 ಬಿಸಿಎಂ – ದಕ್ಷಿಣ ಭಾರತದ ಜಲಾಶಯಗಳಲ್ಲಿ ಸದ್ಯಕ್ಕೆ ಲಭ್ಯವಿರುವ ನೀರು
16% ಹತ್ತು ವರ್ಷಗಳ ಬೇಸಿಗೆಯಲ್ಲಿ ಸಂಗ್ರಹವಾಗುತ್ತಿದ್ದ ಒಟ್ಟಾರೆ ನೀರು
13% ಕಳೆದೊಂದು ವರ್ಷದಿಂದ ಬೇಸಿಗೆ ವೇಳೆ ಸಂಗ್ರಹವಾಗುತ್ತಿರುವ ನೀರ
03 % ಬೇಸಿಗೆಯಲ್ಲಿ ಸಂಗ್ರಹವಾಗುವ ನೀರಿನಲ್ಲಿ ಆಗಿರುವ ಕೊರತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next