Advertisement

ಬಣ್ಣದ ಹೂ ಬಳಸಿ ಓಕುಳಿ ಸಂಭ್ರಮ

05:47 AM Mar 21, 2019 | Team Udayavani |

ಜೇವರ್ಗಿ: ಪತಂಜಲಿ ಯೋಗ ಸಮಿತಿ ಹಾಗೂ ಭಾರತ್‌ ಸ್ವಾಭಿಮಾನ್‌ ಟ್ರಸ್ಟ್‌ ವತಿಯಿಂದ ಗುರುಕುಲ ಶಾಲೆ ಆವರಣದಲ್ಲಿ ಬಣ್ಣಬಣ್ಣದ ಹೂವುಗಳನ್ನು ಎರಚಿ ವಿಶಿಷ್ಠವಾಗಿ ಆಚರಿಸಲಾಯಿತು.

Advertisement

ಪಟ್ಟಣದ ಮಹಾತ್ಮಾ ಗಾಂಧೀಜಿ ರೈತ ಕಲ್ಯಾಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪತಂಜಲಿ ರಾಜ್ಯ ಪ್ರಭಾರಿ ಭವರಲಾಲ್‌ ಆರ್ಯ ಮಾತನಾಡಿ, ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಸರ್ವಶ್ರೇಷ್ಠ. ಇಂತಹ ನಾಡಿನಲ್ಲಿ ಜನ್ಮ ತಾಳಿದವರೇ ಅದೃಷ್ಟ ವಂತರು ಎಂದು ಹೇಳಿದರು.

ಈ ಹೋಳಿಹಬ್ಬದಲ್ಲಿ ಜಿಲ್ಲೆಯ ಚಿತ್ತಾಪುರ, ಚಿಂಚೋಳಿ, ಸೇಡಂ, ಶಹಾಬಾದ, ಆಳಂದ ಹಾಗೂ ವಿವಿಧ ಜಿಲ್ಲೆಯ ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಭಾರತ ಸ್ವಾಭಿಮಾನ ಟ್ರಸ್ಟ್‌ನ ಅಧ್ಯಕ್ಷ ಮಹಾಂತಯ್ಯ ಚ. ಹಿರೇಮಠ, ಪತಂಜಲಿ ಯೋಗ ಸಮಿತಿ ಅಧ್ಯಕ್ಷರಾದ ಅನೀಲ ರಾಂಪೂರೆ, ವಿಜಯಕುಮಾರ ಪಾಟೀಲ ಸೇಡಂ, ಮಲ್ಲಣ್ಣಗೌಡ ಕನ್ಯಾಕೋಳೂರ, ಡಾ| ಪಿ.ಎಂ.ಮಠ, ವೈ.ಎಸ್‌.ಹಿರೇಮಠ, ಪ್ರಾಚಾರ್ಯರಾದ ಜಗದೀಶ ಎಸ್‌. ಉಕನಾಳಕರ್‌, ಸಂಗೀತಾ ಘಂಟಿಮಠ, ಕಾವೇರಿ ಕಟ್ಟಿಸಂಗಾವಿ, ಶರಣಮ್ಮ ಸ್ಥಾವರಮಠ, ನಿರ್ಮಲಾ ಪಲ್ಲೇದ, ರಾಜೇಶ್ವರಿ ಪಾಟೀಲ, ಜಯಶ್ರೀ ದೇಸಾಯಿ, ಪ್ರೇಮಾ ವಿಜಯಕುಮಾರ ಮತ್ತಿತರರು ಪರಸ್ಪರ ಬಣ್ಣದ ಹೂವುಗಳನ್ನು ಎರಚಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next