Advertisement

ಕಲಿಕಾ ಪದ್ಧತಿಯಲ್ಲಿ ತಂತ್ರಜ್ಞಾನ ಬಳಸಿ

04:05 PM Sep 05, 2018 | Team Udayavani |

ಹಾವೇರಿ: ಭೂ ಮಂಡಲ, ನಕ್ಷತ್ರಗಳು, ಗ್ರಹಗಳು, ಚಂದ್ರಮಂಡಲ, ಸೂರ್ಯ ಮಂಡಲ, ಬುಧ, ಶುಕ್ರ, ಶನಿ, ಮಂಗಳ ಗ್ರಹಗಳ ಚಲನವಲನಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಪರಿಚಯಿಸಲು ರಾಜ್ಯ ವಿಜ್ಞಾನ ಪರಿಷತ್‌ ಹಮ್ಮಿಕೊಂಡಿದ್ದ ‘ಶಾಲಾ ಅಂಗಳದಲ್ಲಿ ತಾರಾಲಯ’ ಕಾರ್ಯಕ್ರಮ ನಗರದ ವಿದ್ಯಾರ್ಥಿಗಳಲ್ಲಿ ನಭೋಮಂಡಲದ ವಿಸ್ಮಯಗಳನ್ನು ಪರಿಚಯಿಸಿತು. ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಆಯೋಜಿಸಿದ್ದ ಶಾಲಾ ಅಂಗಳದಲ್ಲಿ ತಾರಾಲಯ ಕಾರ್ಯಕ್ರಮದ ಅಂಗವಾಗಿ ತ್ರಿಡಿ ವಿಡಿಯೋ ಹಾಗೂ ವಿವಿಧ ಮಾದರಿಗಳೊಂದಿಗೆ ಭೂಮಿ ಮತ್ತು ಅಂತರಿಕ್ಷಗಳ ಕೌತುಕಗಳನ್ನು ತಾರಾಲಯಗಳ ಕಾರ್ಯನಿರ್ವಹಣೆ ಕುರಿತಂತೆ ವಿವರನಾತ್ಮಕ ಪರಿಚಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಮಾತನಾಡಿ, ಆಧುನಿಕ ಕಲಿಕಾ ಪದ್ಧತಿಯಲ್ಲಿ ಮಕ್ಕಳ ಪಠ್ಯ ವಿಷಯ ಹೆಚ್ಚು ಮನದಟ್ಟಾಗಲು ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಅತ್ಯಂತ ಅವಶ್ಯವಾಗಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಎಲ್ಲ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಮಕ್ಕಳನ್ನು ವೈಜ್ಞಾನಿಕವಾಗಿ ಹೆಚ್ಚು ಬುದ್ಧಿವಂತರನ್ನಾಗಿಸುವುದು ಅವಶ್ಯವಾಗಿದೆ. ಶಾಲಾ ಅಂಗಳದಲ್ಲಿ ತಾರಾಲಯ ಕಾರ್ಯಕ್ರಮ ಭೂಮಿ ಮತ್ತು ಅಂತರಿಕ್ಷದ ಬಗ್ಗೆ ಮಕ್ಕಳಲ್ಲಿರುವ ಕೌತುಕವನ್ನು ತಣಿಸಲು ಮತ್ತು ಅರಿತುಕೊಳ್ಳಲು ಉಪಕಾರಿಯಾಗಿದೆ ಎಂದರು. ಕಾರ್ಯಕ್ರಮ ವೀಕ್ಷಿಸಿದ ವಿದ್ಯಾರ್ಥಿಗಳು, ತಾರಾಲಯಗಳನ್ನು ವೀಕ್ಷಿಸಲು ನಾವು ಬೆಂಗಳೂರು ಅಥವಾ ಹೈದ್ರಾಬಾದಿಗೆ ಹೋಗಬೇಕಾಗಿತ್ತು.

ಈ ಹಂತದಲ್ಲಿ ಅಲ್ಲಿಗೆ ಹೋಗಿ ವೀಕ್ಷಿಸಲು ನಮಗೆ ಸಾಧ್ಯವಾಗುವುದಿಲ್ಲ. ಆದರೆ, ಪಠ್ಯದಲ್ಲಿ ಮಾತ್ರ ಈ ವಿಷಯವನ್ನು ತಿಳಿದುಕೊಂಡಿದ್ದೇವು. ತಾರಾಲಯದ ಬಗ್ಗೆ ನಮಗಿರುವ ಕೌತುಕವನ್ನು ಹಲವು ಪ್ರಶ್ನೆಗಳು ಈ ಕಾರ್ಯಕ್ರಮದಿಂದ ತಿಳಿದುಕೊಳ್ಳಲು ಸಹಕಾರಿಯಾಗಿದೆ. ಭೂ ಮಂಡಲ, ತಾರಾಮಂಡಲಗಳ ಬಗ್ಗೆ ನಮ್ಮ ತಿಳಿವಳಿಕೆ ಹೆಚ್ಚಾಗಿದೆ ಎಂದು ಸಂತಸ ಹಂಚಿಕೊಂಡರು.

ರಾಜ್ಯ ವಿಜ್ಞಾನ ಪರಿಷತ್ತಿನ ನಿರ್ದೇಶಕ ಆರ್‌.ಎಸ್‌. ಪಾಟೀಲ ಹಾಗೂ ಬೆಂಗಳೂರಿನ ಸಂಚಾರಿ ತಾರಾಲಯದ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಳಗೇರಿ ಮಾತನಾಡಿ, ತಾರಾ ಮಂಡಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ವೈಜ್ಞಾನಿಕ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಶಾಲಾ ಅಂಗಳದಲ್ಲಿ ತಾರಾಲಯ ಕಾರ್ಯಕ್ರಮ ಆಯೋಜಿಸಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಸುತ್ತ ಬಂದಿದ್ದೇವೆ. ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಇಂದಿನಿಂದ ಈ ಕಾರ್ಯಕ್ರಮವನ್ನು ನಡೆಸುತ್ತೇವೆ ಎಂದು ತಿಳಿಸಿದರು. ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಚ್‌.ಎಂ. ಫಡ್ನೀಸ್‌, ಆಂಗ್ಲ ಶಿಕ್ಷಕ ನಾಗರಾಜ ನಡುವಿನಮಠ ವಿವಿಧ ಶಿಕ್ಷಕರು, 270 ಕ್ಕೂ ಅಧಿಕ ವಿದ್ಯಾರ್ಥಿಗಳು  ರಾಲಯ ವೀಕ್ಷಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next