ಲೋಕಾಪುರ: ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ಕಡಿಮೆ ಅವ ಧಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಜತೆಗೆ ಕೃಷಿ ಕಾರ್ಮಿಕರ ಕೊರತೆ ನೀಗಿಸಬಹುದು ಎಂದು ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಚೇರಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಗುಡಗುಂಟಿ ಹೇಳಿದರು.
ವರ್ಚಗಲ್ ಗ್ರಾಮದ ರೈತ ಸಿದ್ದು ಚೌಧರಿ ಅವರ ಜಮೀನಿನಲ್ಲಿ ನೂತನ ಕಬ್ಬು ಕಟಾವು ಮಿಷನ್ ಪ್ರಾಯೋಗಿಕ ಪ್ರದರ್ಶನ ನಡೆಸಿ, ಸೂಪರ್ 74ಮಾಡಲ್ ಕಬ್ಬು ಕಟಾವು ಮಾಡುವ ಯಂತ್ರಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಕೃಷಿ ಪದ್ಧತಿಗೆ ಅನುಗುಣವಾಗಿ ಆಧುನಿಕ ತಾಂತ್ರಿಕತೆಯಿಂದ ಕಬ್ಬು ಕಟಾವು ಮಿಷನ್ ತಯಾರಾಗಿದ್ದು, ಇದರಿಂದ ರೈತರಿಗೆ ಹೆಚ್ಚು ಸಹಕಾರಿ ಯಾಗಲಿದೆ. ಇಂದಿನ ದಿನಮಾನಗಳಲ್ಲಿ ಕೃಷಿ ಕೆಲಸಕ್ಕೆ ಕಾರ್ಮಿಕರ ಕೊರತೆ ಇದ್ದು, ಅಂತಹ ಕೊರತೆ ನೀಗಿಸಲು ಹಾಗೂ ರೈತರು ಬೆಳೆದ ಬೆಳೆ ಸಕಾಲದಲ್ಲಿ ಮಾರುಕಟ್ಟೆತಲುಪಲು ಅನುಕೂಲವಾಗಿ ರೈತರು ಹೆಚ್ಚಿನ ಲಾಭಾಂಶ ಪಡೆಯುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸುಪರ್ ಕೇನ್ ಇಂಜಿನಿಯರ್ ಮಹೇಶ ಜಂಗವಾಡ ಮಾತನಾಡಿ, ನೂತನವಾಗಿ ಸುಪರ್-75 ಮಾಡಲ್ ಕಂಪನಿ ತಯಾರಿಸಿರುವ ಸಿಎಚ್ -75 ಕೋಬ್ರಾ ಕಬ್ಬು ಕಟಾವು ಮಿಷನ್ ಪ್ರಾಯೋಗಿಕ ಪ್ರದರ್ಶನ ರೈತರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮಿಷನ್‌ದಿಂದ ದಿನ ಒಂದಕ್ಕೆ 60ರಿಂದ 70 ಟನ್‌ಕಬ್ಬು ಕಟಾವು ಮಾಡಬಹುದು. ಸುಪರ್ ಕಂಪನಿ ಶತಮಾನಕ್ಕೂ ಹೆಚ್ಚು ವರ್ಷಗಳ ಕಾಲ ರೈತೋಪಯೋಗಿ ಉಪಕರಣ ತಯಾರಿಸುವುದರ ಮೂಲಕ ರೈತರ ಸೇವೆಯಲ್ಲಿ ತೊಡಗಿದ್ದು, ನೂತನ ಅವಿಷ್ಕಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರೈತ ಸಿದ್ದು ಚೌಧರಿ ಮಾತನಾಡಿ ಮಿಷನ್‌ದಿಂದಕಬ್ಬನ್ನು ಕಟಾವು ಮಾಡುವುದರಿಂದ ಹೆಚ್ಚು ನಷ್ಟ ಆಗುವುದಿಲ್ಲ, ಕಬ್ಬಿನ ಬೆಳೆಯಲ್ಲಿ ಹೆಚ್ಚಿನ ಪ್ರಮಾಣದಸಕ್ಕರೆ ಅಂಶ ಕಬ್ಬಿನ ಕೆಳಭಾಗದಲ್ಲಿ ಇರುವುದರಿಂದ ಮಿಷನ್ ಕಟಾವು ಕೆಳಭಾಗವನ್ನು ಕಟ್‌ಮಾಡುವುದರಿಂದ ರೈತರು ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ, ನೂತನ ಕಬ್ಬು ಕಟಾವು ಮಿಷನ್‌ರೈತರು ಮತ್ತು ಕಾರ್ಖಾನೆಯವರಿಗೂ ಕೂಡಾ ಅನುಕೂಲವಾಗಲಿದ್ದು, ಕಟಾವಿನ ನಂತರ ಬರುವಎರಡನೇ ಬೆಳೆ ಫಲಕಾರಿಯಾಗಿರುತ್ತದೆ. ಕಟಾವಿನಿಂದ ಜಮೀನಿನಲ್ಲಿ ಬಿದ್ದ ರವದಿ ಗೊಬ್ಬರವಾಗಿ ಭೂಮಿ ಇನ್ನಷ್ಟು ಫಲವತ್ತಾಗಲು ಅನುಕೂಲವಾಗುತ್ತದೆ ಎಂದರು.
ನಿರಾಣಿ ಸಕ್ಕರೆ ಕಾರ್ಖಾನೆ ನರಸಿಂಗ್ ಪಡಿಯಾರ, ಬಾಗೇವಾಡಿ, ರೈತರಾದ ಸಿದ್ದು ಚೌಧರಿ, ಹಣಮಂತಗೌಡ ಪಾಟೀಲ, ಭೀಮನಗೌಡ ಪಾಟೀಲ, ತಿಮ್ಮಣ್ಣಗೌಡ ತುಳಸಿಗೇರಿ, ಕುಮಾರ ಕೌಲಗಿ, ಮುತ್ತು ಹನಗಲಿ, ರುದ್ರಗೌಡ ಪಾಟೀಲ, ಶಿವಣ್ಣ ಪೂಜಾರ, ನಿಂಗಪ್ಪ ಪೂಜಾರ, ಹಣಮಂತ ಹನಗಲಿ,ಸೊಲಬನಗೌಡ ಪಾಟೀಲ ಹಾಗೂ ಲೋಕಾಪುರವರ್ಚಗಲ್, ಕೊಲುರ, ಜಮ್ಮನಕಟ್ಟಿ ಗ್ರಾಮಗಳ ರೈತರು, ಗ್ರಾಮಸ್ಥರು ಇದ್ದರು.