Advertisement

 “ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆಯಿಂದ ಬಳಸಿ’

01:00 AM Mar 13, 2019 | Team Udayavani |

ಉಡುಪಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ಪಕ್ಷಗಳನ್ನು ಬೆಂಬಲಿಸಿ ಅದರ ಅಭ್ಯರ್ಥಿಗಳ ಪರವಾಗಿ ಸಂದೇಶ ರವಾನಿಸಲು ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವುದನ್ನು ಚುನಾವಣಾ ಆಯೋಗ ನಿಷೇಧಿಸಿದ್ದು, ಈ ಬಗ್ಗೆ ದೂರುಗಳು ಬಂದರೆ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದೆ ಎಂದು ಮಣಿಪಾಲ ಪೊಲೀಸ್‌ ಠಾಣೆಯ ಸಹ ನಿರೀಕ್ಷಕ  ಶ್ರೀಧರ್‌ ನಂಬಿಯಾರ್‌ ಹೇಳಿದರು. 

Advertisement

ಮಣಿಪಾಲದ ಈಶ್ವರನಗರ ವಾರ್ಡ್‌ ನಾಗರಿಕ ಸಮಿತಿ ಮತ್ತು ಮಣಿಪಾಲ ಆರಕ್ಷಕ ಠಾಣೆ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಪೊಲೀಸ್‌ ಗಸ್ತು ಸಭೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.   
ಪ್ರೊಬೆಷನರಿ  ಪಿಎಸ್‌ಐ  ನಿರಂಜನ್‌ ಸೂಕ್ತ  ಸಲಹೆ ನೀಡಿದರು.   

ನಗರಸಭಾ ಸದಸ್ಯ ಮಂಜುನಾಥ್‌ ಮಣಿಪಾಲ, ಗಸ್ತು ಪೊಲೀಸ್‌ ಸಿಬಂದಿ  ಶುಭಾ ಕಾರ್ಯಕ್ರಮ ಯೋಜಿಸಿದ್ದರು. 
ನಾಗರಿಕ ಗಣ್ಯರಾದ ಸುಬ್ರಹ್ಮಣ್ಯ ಪೈ,  ರವೀಂದ್ರನ್‌ ನಾಯರ್‌,  ಹರೀಶ್‌ ಕಲ್ಮಾಡಿ, ಸುಬ್ರಾಯ ಆಚಾರ್‌, ಮಾಯಾ ಕಾಮತ್‌,  ಸತೀಶ್‌ ಸಾಲಿಯಾನ್‌, ಅಲ್ವಿನ್‌ ಡಿ ಸೋಜಾ, ಶ್ರೀನಾಥ್‌ ಮಣಿಪಾಲ, ಭಾಸ್ಕರ್‌ ಮಣಿಪಾಲ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next