Advertisement

ಸಾಮಾಜಿಕ ಜಾಲತಾಣ ಕಡ್ಡಾಯವಾಗಿ ಬಳಸಿ..

09:11 AM Oct 07, 2017 | Team Udayavani |

ಬೆಂಗಳೂರು: ಕಾಂಗ್ರೆಸ್‌ನ ಎಲ್ಲ ನಾಯಕರು ಕಡ್ಡಾಯ ವಾಗಿ ಸಾಮಾಜಿಕ ಜಾಲತಾಣ ಬಳಸುವಂತೆ ಕಾಂಗ್ರೆಸ್‌
ಉಸ್ತುವಾರಿ ವೇಣುಗೋಪಾಲ ಸೂಚಿಸಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸೋಸಿಯಲ್‌ ಮಿಡಿಯಾ ಬಳಸುವ ಶಾಸಕರ ಪಟ್ಟಿ ಪಡೆದ ವೇಣುಗೋಪಾಲ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಳಕೆ ಮಾಡದವರಿಗೆ ತಕ್ಷಣ ಸಾಮಾಜಿಕ ಜಾಲತಾಣಗಳನ್ನು ಬಳಸುವಂತೆ ಸೂಚಿಸಿದ್ದಾರೆ.

Advertisement

ಉಮಾಶ್ರೀಗೆ ತರಾಟೆ: ಸಚಿವೆ ಉಮಾಶ್ರೀ ಅವರನ್ನು ನೇರವಾಗಿ ಪ್ರಶ್ನಿಸಿರುವ ವೇಣುಗೋಪಾಲ, “ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಯಾವುದೇ ಪೋಸ್ಟ್‌ಗಳು ಕಾಣುವುದಿಲ್ಲ. ನೀವು ಸಚಿವರಾಗಿ ಸಾಮಾಜಿಕ ಜಾಲತಾಣದ ಮೂಲಕ ಇಲಾಖೆಯ ಸಾಧನೆಗಳ ಜೊತೆಗೆ, ಪಕ್ಷವನ್ನು ಸಮರ್ಥಿಸಿಕೊಳ್ಳಬೇಕು’ ಎಂದು ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಠೇವಣಿ ಕಳೆದುಕೊಂಡವರನ್ನು ಸಭೆಗೆ ಕರೆದು ಕಡಿಮೆ ಅಂತರದಿಂದ ಸೋತವರಿಗೆ ಅವಮಾನ ಮಾಡಬೇಡಿ ಎಂದು ಮಧುಗಿರಿ ಶಾಸಕ ಕೆ.ಎನ್‌.ರಾಜಣ್ಣ ಅವರು ಸಭೆಯಲ್ಲಿ ಹೇಳಿದರು. ಅತಿ ಕಡಿಮೆ ಮತ ಪಡೆದ ಅಭ್ಯರ್ಥಿಗಳ ಬದಲು ಬೇರೆಯವರಿಗೆ ಅವಕಾಶ ಮಾಡಿಕೊಡುವಂತೆ ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಸಚಿವರಾದ ಎಚ್‌.ಎಂ. ರೇವಣ್ಣ, ಆರ್‌.ಬಿ.ತಿಮ್ಮಾಪುರ, ಗೀತಾ ಮಹದೇವ ಪ್ರಸಾದ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಅವರನ್ನು ಸನ್ಮಾನಿಸಲಾಯಿತು. 

ದೂರು ನೀಡಲು ಅವಕಾಶ ನೀಡದ ವೇಣು: ಅನೇಕ ಶಾಸಕರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗಳಲ್ಲಿ ಜಿಲ್ಲಾ
ಉಸ್ತುವಾರಿ ಸಚಿವರುಗಳು ಸರಿಯಾಗಿ ಸ್ಪಂದಿಸದಿರುವ ಬಗ್ಗೆ ಸಾಕಷ್ಟು ದೂರು ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಸಭೆಯ ಆರಂಭದಲ್ಲೇ ಯಾವುದೇ ದೂರು ನೀಡಲು ಅವಕಾಶ ಇಲ್ಲ ಎಂದು ವೇಣುಗೋಪಾಲ ತಾಕೀತು ಮಾಡಿದ್ದಾರೆ. 

ಶಾಸಕರು ಮತ್ತು ಸಚಿವರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗುವಂತೆ ವೇಣುಗೋಪಾಲ ಅವರು ಸೂಚನೆ ನೀಡಿದ್ದಾರೆ. ಮುಂದಿನ ಮುಖ್ಯಮಂತ್ರಿ ಯಾರೆನ್ನುವ ಬಗ್ಗೆ ಯಾವುದೇ ಗೊಂದಲ ಇಲ್ಲ. ಈ ಬಗ್ಗೆ ಶಾಸಕಾಂಗ ಸಭೆ ಮತ್ತು ಹೈಕಮಾಂಡ್‌ ತೀರ್ಮಾನ ಮಾಡುತ್ತದೆ.
●ಡಾ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next