Advertisement

ಆಸ್ಪತ್ರೆಯಲ್ಲೇ ರೆಮಿಡಿಸಿವಿರ್‌ ಬಳಸಿ

12:03 AM Apr 30, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಸೋಂಕು ಪರಿಸ್ಥಿತಿ ಬಿಗಡಾಯಿಸುತ್ತಿರುವಂತೆ ಕೇಂದ್ರ ಸರಕಾರ ಹೋಮ್‌ ಐಸೊಲೇಶನ್‌ನ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಿಶೇಷವಾಗಿ ರೋಗಲಕ್ಷಣ ರಹಿತ ಮತ್ತು ಅಲ್ಪ ಪ್ರಮಾಣದ ಲಕ್ಷಣಗಳು ಇರುವವರಿಗೆ ಇದರಿಂದ ಅನುಕೂಲವಾಗಲಿದೆ. ಮನೆಯಲ್ಲಿ ರೆಮಿಡಿಸಿವಿರ್‌ ಇಂಜೆಕ್ಷನ್‌ ಪಡೆಯುವುದನ್ನು ನಿಷೇಧಿಸಲಾಗಿದ್ದು, ಆಸ್ಪತ್ರೆಯಲ್ಲಿ ಮಾತ್ರ ಪಡೆಯಬೇಕು ಎಂದು ಸಲಹೆ ಮಾಡಲಾಗಿದೆ. ಮತ್ತೂಂದು ಗಮನಾರ್ಹ ಅಂಶವೆಂದರೆ ಸೋಂಕು ದೃಢಪಟ್ಟವರು ಮನೆಯಲ್ಲಿರುವಾಗ ಕೂಡ ಮೂರು ಪದರಗಳ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಲಾಗಿದೆ.

Advertisement

ಇನ್ನಿತರ ಸಲಹೆಗಳು :

  • ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಶ್ವಾಸ ಕೋಶ, ಪಿತ್ತಕೋಶ, ಮೂತ್ರಪಿಂಡ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟವರು ಮನೆಯಲ್ಲೇ ಐಸೊಲೇಶನ್‌ನಲ್ಲಿ ಇರುವಂತಿಲ್ಲ. ಮನೆಯಲ್ಲೇ ಇರಬೇಕೆಂದಾದರೆ ವೈದ್ಯಕೀಯ ತಜ್ಞರು ಶಿಫಾರಸು ಮಾಡಬೇಕು.
  • ಅಲ್ಪ ಪ್ರಮಾಣದ ಲಕ್ಷಣ ಇರುವವರಿಗೆ ಓರಲ್‌ ಸ್ಟೀರಾಯ್ಡ ನೀಡುವಂತಿಲ್ಲ.
  • ಜ್ವರ, ವಿಪರೀತ ಕೆಮ್ಮು 7 ದಿನಗಳಿಗಿಂತ ಹೆಚ್ಚಾಗಿದ್ದರೆ ವೈದ್ಯರ ಸಲಹೆ ಪಡೆಯಬೇಕು.
  • ಮನೆಯಲ್ಲಿ ಐಸೊಲೇಶನ್‌ ಆಗಲು ಸೂಕ್ತ ವ್ಯವಸ್ಥೆಗಳು ಇರಬೇಕು.
  • ಮನೆಯಲ್ಲಿ ವೈದ್ಯರ ಸಲಹೆಯಿಲ್ಲದೆ ರೆಮಿಡಿಸಿವಿರ್‌ ಪಡೆಯುವಂತಿಲ್ಲ.
  • ಸೋಂಕುಪೀಡಿತರು ಮನೆಯಲ್ಲಿ ಇರುವಾಗಲೂ ಮೂರು ಪದರಗಳುಳ್ಳ ಮಾಸ್ಕ್ ಧರಿಸಬೇಕು. 8 ತಾಸುಗಳ ಬಳಿಕ ಬದಲಾಯಿಸಬೇಕು.
  • ಸೋಂಕುಪೀಡಿತರು ಇರುವ ಕೊಠಡಿಗೆ ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆ ಇರಬೇಕು.
  • ಸೋಂಕುಪೀಡಿತರ ಕೊಠಡಿಗೆ ಆರೈಕೆದಾರರು ಪ್ರವೇಶಿಸುವಾಗ ಇಬ್ಬರೂ ಮಾಸ್ಕ್ ಧರಿಸಬೇಕು. ಎನ್‌95 ಮಾಸ್ಕ್ ಆದರೆ ಉತ್ತಮ.
  • ಕೋವಿಡ್ ಪೀಡಿತರು ಸಾಕಷ್ಟು ದ್ರವಾಹಾರ ಸೇವಿಸಬೇಕು.
  • ದಿನಕ್ಕೆ ಎರಡು ಬಾರಿ ಬಿಸಿ ನೀರಿನ ಆವಿ ತೆಗೆದುಕೊಳ್ಳಬೇಕು ಅಥವಾ ಬಿಸಿ ನೀರಿನಲ್ಲಿ ಗಂಟಲು ಸ್ವಚ್ಛಗೊಳಿಸಬೇಕು.
  • ಕೈಗಳನ್ನು ಆಗಾಗ ಸಾಬೂನು ಬಳಸಿ ತೊಳೆಯಬೇಕು ಅಥವಾ ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು.
  • ಆಮ್ಲಜನಕ ಪ್ರಮಾಣ ಕುಸಿಯುತ್ತಿದ್ದರೆ ಅಥವಾ ಉಸಿರಾಟಕ್ಕೆ ತೊಂದರೆ ಉಂಟಾದರೆ ಆಸ್ಪತ್ರೆಗೆ ದಾಖಲಿಸಬೇಕು.
  • ಹತ್ತು ದಿನಗಳ ಬಳಿಕ ಹೋಮ್‌ ಐಸೊಲೇಶನ್‌ ಇದ್ದವರು ಎಂದಿನ ಜೀವನ ಶೈಲಿಗೆ ವಾಪಸಾಗಬಹುದು.
  • ಆರೈಕೆದಾರರು ಸೋಂಕುಪೀಡಿತರ ಬಗ್ಗೆ 24 ತಾಸು ನಿಗಾ ಇರಿಸಬೇಕು.
  • ಎಚ್‌ಐವಿ, ಕ್ಯಾನ್ಸರ್‌ ಚಿಕಿತ್ಸೆ ಪಡೆಯುವವರು, ಕಿಡ್ನಿ ಕಸಿ ಮಾಡಿಸಿಕೊಂಡವರು ಹೋಮ್‌ ಐಸೋಲೇಶನ್‌ನಲ್ಲಿ ಇರುವಂತಿಲ್ಲ.
Advertisement

Udayavani is now on Telegram. Click here to join our channel and stay updated with the latest news.

Next