Advertisement

ಸೇನೆ ವಿಷಯ ರಾಜಕೀಯಕ್ಕೆ ಬಳಕೆ

12:45 AM Apr 08, 2019 | Team Udayavani |

ಸಾಗರ: ಭಾರತದ ರಾಜಕೀಯ ಇತಿಹಾಸದಲ್ಲಿ ಈವರೆಗೂ ಯಾವುದೇ ಪಕ್ಷ ಭಾರತೀಯ ಸೇನೆಯ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡ ಉದಾಹರಣೆ ಇಲ್ಲ. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾರತೀಯ ಸೇನೆಯ ಯೋಧರನ್ನುತಮ್ಮ ಪಕ್ಷದ ಆಸ್ತಿ ಎನ್ನುವಂತೆ ಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕಿನ ಮಾಸೂರು ಗ್ರಾಮದಲ್ಲಿ ಚುನಾವಣಾಪ್ರಚಾರ ಸಭೆಯಲ್ಲಿ ಮಾತನಾಡಿ, ಇದುವರೆಗೂ ರಾಮನ ಹೆಸರು ಹೇಳಿ ಓಟು ಕೇಳುತ್ತಿದ್ದ ಬಿಜೆಪಿ, ಈಗ ರಾಮನನ್ನು ಮರೆತಿದೆ. ರಾಮನ ಬದಲು ಸೇನೆಯನ್ನು ರಾಜಕೀಯಕ್ಕೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದರು.

ಅರಣ್ಯಭೂಮಿ ಸಾಗುವಳಿದಾರರ ಸಮಸ್ಯೆ ಬಗೆಹರಿಯಬೇಕು ಎಂದಾದರೆ ಲೋಕಸಭೆಯಲ್ಲಿ ಕಾನೂನಿನ ತಿದ್ದುಪಡಿಯಾಗಬೇಕು. ಈವರೆಗೆ ಬಿಜೆಪಿಯಿಂದ ಗೆದ್ದಸಂಸದರು ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆಸಿ ಲ್ಲ. ಜನರ ನೈಜ ಸಮಸ್ಯೆಗಳು ಬಗೆಹರಿಯುವುದು ಬಿಜೆಪಿಗೆ ಬೇಕಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next