Advertisement

ಲೌಡ್‌ ಸ್ಪೀಕರ್‌ ಬಳಕೆ : ಸುಪ್ರೀಂ ಕೋರ್ಟ್‌ನಲ್ಲಿ ಬಿಜೆಪಿಗೆ ಮುಖಭಂಗ

10:30 AM Feb 11, 2019 | udayavani editorial |

ಹೊಸದಿಲ್ಲಿ :ರಾಜ್ಯದಲ್ಲಿನ ವಸತಿ ಪ್ರದೇಶಗಳ ವ್ಯಾಪ್ತಿಯಲ್ಲಿ ಲೌಡ್‌ ಸ್ಪೀಕರ್‌ ಗಳನ್ನು ಬಳಸಬಾರದು ಎಂಬ ಪಶ್ಚಿಮ ಬಂಗಾಲ ಸರಕಾರದ ಆದೇಶವನ್ನು ಪ್ರಶ್ನಿಸಿರುವ ಆಳುವ ಬಿಜೆಪಿ ಸುಪ್ರೀಂ ಕೋರ್ಟಿನಿಂದ ಮುಖಭಂಗವಾಗಿದೆ.

Advertisement

ರಾಜಕೀಯ ರಾಲಿಗಳಿಗಿಂತಲೂ ವಿದ್ಯಾರ್ಥಿಗಳ ಮುಂದಿರುವ ವಾರ್ಷಿಕ ಪರೀಕ್ಷೆಗಳು ಅತ್ಯಂತ ಮುಖ್ಯವಾಗಿವೆ; ಆದುದರಿಂದ ಪ.ಬಂಗಾಲ ಸರಕಾರ ರಾಜ್ಯದಲ್ಲಿನ ವಸತಿ ಪ್ರದೇಶಗಳಲ್ಲಿ ರಾಜಕೀಯ ರಾಲಿಗಳಲ್ಲಿ ಲೌಡ್‌ ಸ್ಪೀಕರ್‌ ಬಳಸುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶ ಸರಿಯಾಗಿಯೇ ಇದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

ಪ.ಬಂಗಾಲದ ವಸತಿ ಪ್ರದೇಶಗಳ ವ್ಯಾಪ್ತಿಯಲ್ಲಿ ರಾಜಕೀಯ ರಾಲಿಗಳ ಸಂದರ್ಭದಲ್ಲಿ ಲೌಡ್‌ ಸ್ಪೀಕರ್‌ ಬಳಸುವುದನ್ನು ಮೊದಲಾಗಿ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿತ್ತು.

ಕಲ್ಕತ್ತ ಹೈಕೋರ್ಟ್‌ ಈ ಆದೇಶವನ್ನು ಎತ್ತಿ ಹಿಡಿದಿತ್ತು. ಬಿಜೆಪಿ ಇದನ್ನು ಪ್ರಶ್ನಿಸಿದಾಗ ಸುಪ್ರೀಂ ಕೋರ್ಟ್‌ ಕೂಡ ಅದನ್ನು ಎತ್ತಿ ಹಿಡಿಯಿತು.  

Advertisement

Udayavani is now on Telegram. Click here to join our channel and stay updated with the latest news.

Next