Advertisement

ಕುಡಿವ ನೀರಿಗೆ ಅನುದಾನ ಬಳಕೆ

07:07 AM Jun 18, 2020 | Team Udayavani |

ಮಧುಗಿರಿ: ಸರ್ಕಾರದಿಂದ ಬಂದಿರುವ 2 ಕೋಟಿಯ 2020-21ನೇ ಸಾಲಿನ ಕ್ರಿಯಾ ಯೋಜನೆಗೆ ತಾಪಂ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಗಿದೆ ಎಂದು ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಹೇಳಿದರು. ಪಟ್ಟಣದ ತಾಪಂ  ಸಭಾಂಗಣ ದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ  ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

Advertisement

ಈ ಅನುದಾನದವನ್ನು ಹೆಚ್ಚಾಗಿ  ಕುಡಿಯುವ ನೀರಿನ ಬಳಕೆಗೆ ಬಳಸಲು ಸೂಚಿಸಿದ್ದು, ನೈರ್ಮಲ್ಯ ಹಾಗೂ ಆರೋಗ್ಯ ಕಾಪಾಡಿ  ಅಂತರ್ಜಲ ವೃದಿಟಛಿಸುವ ಕಾರ್ಯ ಗಳಿಗೆ ವಿನಿಯೋಗಿಸುವಂತೆ ಸೂಚಿಸಿದರು. ಕೋವಿಡ್‌-19 ವಿಚಾರದಲ್ಲಿ ತಾಲೂಕಿ ನಲ್ಲಿ 2 ಪ್ರಕರಣ ಪತ್ತೆಯಾಗಿದ್ದು, ಮೊದಲ ಪ್ರಕರಣದ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದು, ಎರಡನೇ ಪ್ರಕರಣದ  ವ್ಯಕ್ತಿಯ ಪ್ರವಾಸದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಟಿಎಚ್‌ಒ ಡಾ.ರಮೇಶ್‌ಬಾಬು ತಿಳಿಸಿದರು.

ಮಾದೇನಹಳ್ಳಿಯಲ್ಲಿ ನಿರ್ಮಿಸಿರುವ ಹೆಡ್‌ಟ್ಯಾಂಕ್‌ಗೆ ನೀರು ಹರಿಸಲು ಅಧ್ಯಕ್ಷರು ಅಧಿಕಾರಿ ಗಳಿಗೆ ಸೂಚಿಸಿದರು. ಕೆಲವು ಇಲಾಖೆಗಳ ಕಚೇರಿಯಲ್ಲಿ  ಮಧ್ಯಾ ಹ್ನದ ವೇಳೆ ಅಧಿಕಾರಿಗಳು ಇರುವುದಿಲ್ಲ ಎಂದು ಕೆಲ ಸದಸ್ಯರು ಆರೋಪಿ ಸಿದರು. ಸಭೆಯಲ್ಲಿ ಕೆಲ ಸದಸ್ಯರು ಅಧಿಕಾರಿಗಳನ್ನು ಏಕವಚನದಲ್ಲಿ ಕರೆದಾಗ ಕೆಲವರು ಆಕ್ಷೇಪ ಎತ್ತಿದ್ದು, ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಇಂತಹ ಸಂದರ್ಭಗಳು ಸುಗಮ ಆಡಳಿತಕ್ಕೆ ತೊಡಕಾಗಿದ್ದು, ಮತ್ತೆ ಮರುಕಳಿಸಬಾರದು ಎಂದು ಮೌನವಾಗಿದ್ದ ಅಧ್ಯಕ್ಷೆ ಇಂದಿರಾ ಇಬ್ಬರಿಗೂ ಸಲಹೆ ನೀಡಿ ಸಭೆ ಮುಂದುವರಿಯಲು ಸೂಚಿ ಸಿದರು. ತಾಪಂ ಉಪಾಧ್ಯಕ್ಷ  ಕ್ಷ್ಮಿನರಸಪ್ಪ, ಇಒ ದೊಡ್ಡಸಿದ್ದಯ್ಯ, ಇತರೆ ಇಲಾಖೆಗಳ ಅಧಿಕಾರಿಗಳು, ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next