Advertisement
ವೈರಾಣುಗಳ ಶಮನಕ್ಕೆ ಬೆಳ್ಳುಳ್ಳಿ ರಾಮಬಾಣ : ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಪೋಷಕಾಂಶವು ಜೀವಿರೋಧಿ ವೈರಸ್ ವಿರೋಧಿ, ಬೂಸುನಿವಾರಕ ಮತ್ತು ರೋಗ ನಿರೋಧಕ ಶಕ್ತಿ ಗುಣಗಳನ್ನು ಹೊಂದಿರುವುದರಿಂದ ಹಲವು ರೀತಿಯಲ್ಲಿ ಆರೋಗ್ಯವನ್ನು ರಕ್ಷಿಸುತ್ತದೆ. ಇದರ ಪೂರ್ಣ ಉಪಯೋಗ ಪಡೆಯಲು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ, ಅಥವಾ ಅರೆದು ಕೊಂಚ ಕಾಲ ಬಿಟ್ಟು ಸೇವಿಸುವುದು ಉತ್ತಮ. ಬೆಳ್ಳುಳ್ಳಿಯಲ್ಲಿ ಉತ್ತಮ ಪ್ರಮಾಣದ ಸಿಲಿನಿಯಂ ಕೂಡ ಇದ್ದು, ವೈರಸ್ ಗಳಿಂದ ಎದುರಾಗುವ ಸೋಂಕುಗಳಿಂದ ರಕ್ಷಣೆ ನೀಡಲಿದೆ.
Related Articles
Advertisement
ಮನಸ್ಥಿತಿ ಸುಧಾರಣೆ : ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬೆಳ್ಳುಳ್ಳಿ ತುಂಬಾ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವಿಸಿದರೆ ಆಗ ಅದು ನೈಸರ್ಗಿಕವಾಗಿ ಮನಸ್ಥಿತಿ ಸುಧಾರಣೆ ಮಾಡುವುದು. ದೇಹದಲ್ಲಿನ ರಾಸಾಯನಿಕಗಳನ್ನು ಇದು ಸಮತೋಲನದಲ್ಲಿ ಇಡುವುದು ಮತ್ತು ಮೆದುಳಿನ ರಾಸಾಯನಿಕಗಳನ್ನು ಕೂಡ. ಖಿನ್ನತೆಯು ಮೆದುಳಿನ ರಾಸಾಯನಿಕದ ಅಸಮತೋಲನದಿಂದ ಬರುವುದು ಮತ್ತು ಬೆಳ್ಳುಳ್ಳಿಯು ಖಿನ್ನತೆ ವಿರುದ್ಧ ಹೋರಾಡಲು ನೆರವಾಗವುದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ : ಮಧುಮೇಹಿಗಳಿಗೆ ಬೆಳ್ಳುಳ್ಳಿಯು ತುಂಬಾ ಪ್ರಯೋಜನಕಾರಿ. ಇದರಲ್ಲಿ ಇರುವಂತಹ ಅಲಿಸಿನ್ ಎನ್ನುವ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮತ್ತು ತಗ್ಗಿಸುವುದು. ಬೆಳ್ಳುಳ್ಳಿಯನ್ನು ಜಜ್ಜಿಕೊಂಡಾಗ ಅಥವಾ ಕತ್ತರಿಸಿದಾಗ ಅಲಿಸಿನ್ ಹೆಚ್ಚಾಗುವುದು. ಜಜ್ಜಿಕೊಂಡ ಬೆಳ್ಳುಳ್ಳಿಯನ್ನು ದಿನದಲ್ಲಿ ಎರಡು ಸಲ ಸೇವಿಸಿದರೆ, ಆಗ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು.
ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ : ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಅದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಅಧಿಕ ರಕ್ತದೊತ್ತಡದ ಸಮಸ್ಯೆಯ ಅಪಾಯವಿರುವಂತಹ ಜನರಿಗೆ ವೈದ್ಯರು ಕೂಡ ಬೆಳ್ಳುಳ್ಳಿ ಸೇವನೆ ಮಾಡಲು ಸೂಚಿಸುವರು.
ರಕ್ತನಾಳದ ಆರೋಗ್ಯ : ಬೆಳಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಅದು ರಕ್ತಕ್ಕೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿಯಲ್ಲಿ ಇರುವ ನಿರ್ವಿಷಗೊಳಿಸುವ ಅಂಶವು ರಕ್ತನಾಳದಲ್ಲಿ ಇರುವಂತಹ ಕಲ್ಮಶವನ್ನು ತೆಗೆಯುವುದು ಮತ್ತು ರಕ್ತನಾಳದ ಆರೋಗ್ಯವನ್ನು ಸುಧಾರಿಸುವುದು. ಆ್ಯಂಟಿ ಆಕ್ಸಿಡೆಂಟ್, ರೋಗನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣ ಹೊಂದಿರುವಂತಹ ಬೆಳ್ಳುಳ್ಳಿಯು ರಕ್ತ ಶುದ್ಧೀಕರಿಸಲು ಪ್ರಮುಖ ಪಾತ್ರ ವಹಿಸುವುದು.
ಕ್ಯಾನ್ಸರ್ ನಿವಾರಣೆಯ ಗುಣವೂ ಇದೆ : ಬೆಳ್ಳುಳ್ಳಿಯಲ್ಲಿ ಉರಿಯೂತ ಶಮನಕಾರಿ, ರೋಗನಿರೋಧಕ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳು ಇವೆ. ಖಾಲಿ ಹೊಟ್ಟೆಯಲ್ಲಿ ನೀವು ಬೆಳ್ಳುಳ್ಳಿ ಸೇವಿಸಿದರೆ ಅದರಿಂದ ಕೆಲವೊಂದು ರೀತಿಯ ಕ್ಯಾನ್ಸರ್ ನ್ನು ತಡೆಯಬಹುದು. ಬೆಳ್ಳುಳ್ಳಿಯಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದು ದೇಹವನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.