Advertisement
ಸೋಮವಾರದಿಂದ ಅತಿಥಿ ಉಪನ್ಯಾಸಕರು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರ ಡಲು ನಿರ್ಧರಿಸಿದ್ದಾರೆ. ಇತ್ತ ರಾಜ್ಯ ಸರಕಾರ ಸೋಮವಾರ ಕಾಲೇಜು ಗಳಿಗೆ ಗೈರು ಹಾಜರಾಗುವ ಅತಿಥಿ ಉಪನ್ಯಾಸಕರ ಪಟ್ಟಿ ತಯಾರಿ ಸಲು ಸಿದ್ಧತೆ ನಡೆಸಿದೆ. ತನ್ಮೂಲಕ ಅತಿಥಿ ಉಪನ್ಯಾಸಕರು ಮತ್ತು ಸರಕಾರದ ಮಧ್ಯೆ ಸಂಘರ್ಷ ತಾರಕಕ್ಕೇರುವುದು ನಿಚ್ಚಳವಾಗಿದೆ.
Related Articles
Advertisement
ಬಾಕಿ ಅರ್ಜಿಗಳ ಪರಿಗಣನೆ?ಇದರ ಜತೆಗೆ 11 ಸಾವಿರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನಿಸಿದಾಗ 30 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 5 ಸಾವಿರ ಮಂದಿಯ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿತ್ತು. ಒಂದು ವೇಳೆ ಅತಿಥಿ ಉಪನ್ಯಾಸಕರ ಹೋರಾಟ ಮುಂದುವರಿದರೆ ಈ 5 ಸಾವಿರ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನು ತ್ವರಿತಗೊಳಿಸ ಲಾಗುವುದು. ಜತೆಗೆ ಇನ್ನೂ ಸಾವಿರಾರು ಅತಿಥಿ ಉಪನ್ಯಾಸಕರ ಅರ್ಜಿಗಳು ಇರುವುದರಿಂದ ಅವರ ನೇಮಕಕ್ಕೂ ಪ್ರಯತ್ನ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ರಾಜ್ಯದಲ್ಲಿ ನೂರಾರು ಮಂದಿ ಪಿಎಚ್‌ಡಿ ವಿದ್ಯಾರ್ಥಿಗಳಿದ್ದಾರೆ. ಅವರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿಯೂ ಕಾಲೇಜು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಇಂದಿನಿಂದ ಪಾದಯಾತ್ರೆ
ರಾಜ್ಯ ಸರಕಾರ ನೀಡಿರುವ ಮಾಸಿಕ 5 ಸಾವಿರ ರೂ. ಗೌರವ ಧನ ಹೆಚ್ಚಳ, ಆರೋಗ್ಯ ವಿಮೆ, 5 ಲಕ್ಷ ರೂ.ಗಳ ನಿವೃತ್ತಿ ಇಡಗಂಟು ಭರವಸೆಯನ್ನು ನಾವು ಒಪ್ಪುವುದಿಲ್ಲ. ನಮಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಸೇವಾ ಭದ್ರತೆ ಅಥವಾ ಸೇವಾ ಖಾಯಮಾತಿ ನೀಡಬೇಕು ಎಂದು ಹಠ ಹಿಡಿದಿರುವ ಅತಿಥಿ ಉಪನ್ಯಾಸಕರು, ಸೋಮವಾರ ತುಮಕೂರಿನ ಸಿದ್ಧಗಂಗಾ ಮಠದ ಆವರಣದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಿದ್ದಾರೆ.
ಸೇವಾ ಭದ್ರತೆ ನೀಡಬೇಕು ಎಂಬ ನಮ್ಮ ಬೇಡಿಕೆ ಈಡೇರುವ ತನಕ ನಾವು ಹೋರಾಟ ಮುಂದುವರಿಸಲಿದ್ದೇವೆ. ಅತಿಥಿ ಉಪನ್ಯಾಸಕರೆಲ್ಲರೂ ಒಗ್ಗಟ್ಟಾಗ್ಗಿದ್ದೇವೆ. ನಮ್ಮ ವಿರುದ್ಧ ಸರಕಾರ ಕಠಿನ ಕ್ರಮಕ್ಕೆ ಮುಂದಾದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಅತಿಥಿ ಉಪನ್ಯಾಸಕರ ಒಕ್ಕೂಟದ ರಾಜ್ಯಾಧ್ಯಕ್ಷ ನಾಗನಾಳ ಮುನಿಯಪ್ಪ ಹೇಳಿದ್ದಾರೆ. ನಮ್ಮ ಸರಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ, ಪರಿಹಾರ ಕಲ್ಪಿಸಲು ಪ್ರಯತ್ನಿಸಿದೆ. ಆದರೆ ಅವರು ತಮ್ಮ ಪಟ್ಟು ಸಡಿಲಿಸಿಲ್ಲ ಎಂದರೆ ನಾವು ನಮ್ಮ ಮುಂದಿರುವ ಎಲ್ಲ ಪರ್ಯಾಯ ಮಾರ್ಗಗಳನ್ನು ಶೋಧಿಸುತ್ತಿದ್ದೇವೆ. ಕಠಿನ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ.
– ಡಾ| ಎಂ. ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ