Advertisement
-ಆಪಲ್ ಸಿಡರ್ ವಿನೆಗರ್ ತ್ವಚೆಯಲ್ಲಿನ ಪಿಎಚ್ ಬ್ಯಾಲೆನ್ಸ್ ಅನ್ನು ಸಮತೋಲನದಲ್ಲಿಡಲು ಉಪಯುಕ್ತ. ಹಾಗಾಗಿ ಇದನ್ನು ಟೋನರ್‌ನಂತೆ ಬಳಸಬಹುದು.-ಒಂದು ಚಮಚ ಎಸಿವಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಹತ್ತಿಯಿಂದ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಳ್ಳಿ. ಇದು ಉತ್ತಮ ಟೋನರ್ ಆಗಿದ್ದು ತ್ವಚೆಯ ಹೊರಪದರವನ್ನು ಧೂಳು, ಕಲ್ಮಷಗಳಿಂದ ರಕ್ಷಿಸುತ್ತದೆ.
– ಸನ್‌ಬರ್ನ್, ಸನ್‌ಟ್ಯಾನ್ ನಿವಾರಣೆಯಲ್ಲಿಯೂ ಆಪಲ್ ಸಿಡರ್ ವಿನೆಗರ್ ಸಹಕಾರಿ. ದಿನವೂ ಸ್ನಾನದ ನೀರಿಗೆ 2 ಚಮಚ ಆಪಲ್ ಸಿಡರ್ ವಿನೆಗರ್ ಸೇರಿಸಿದರೆ ಸನ್ ಬರ್ನ್ ದೂರವಾಗುತ್ತದೆ.
-ಮೊಡವೆ ಕಲೆ, ಪಿಗ್‌ಮೆಂಟೇಷನ್‌ಗಳನ್ನು ಕೂಡ ಇದು ನಿವಾರಿಸುತ್ತದೆ. ಮುಲ್ತಾನಿ ಮಿಟ್ಟಿಯೊಂದಿಗೆ 2 ಚಮಚ ಎಸಿವಿ ಸೇರಿಸಿ ಫೇಸ್‌ಪ್ಯಾಕ್ ಹಾಕಿಕೊಳ್ಳಿ. ವಾರಕ್ಕೊಮ್ಮೆ ಹೀಗೆ ಮಾಡಿದರೆ ಕಲೆಗಳು ಮಾಯವಾಗುತ್ತವೆ.
– ಸೌತೆಕಾಯಿಯ ರಸಕ್ಕೆ 1 ಚಮಚ ಆಪಲ್ ಸಿಡರ್ ವಿನೆಗರ್ ಸೇರಿಸಿ ಮುಖಕ್ಕೆ ಹಚ್ಚಿ, ಕಾಲು ಗಂಟೆಯ ನಂತರ ತೊಳೆದರೆ ಚರ್ಮದ ಸುಕ್ಕು, ನೆರಿಗೆಗಳು ಹೋಗುತ್ತವೆ.
– ತಲೆಗೆ ಸ್ನಾನ ಮಾಡಿದ ನಂತರ ಒಂದು ಬೌಲ್ ನೀರಿಗೆ, 3 ಚಮಚ ಎಸಿವಿ ಸೇರಿಸಿ ಕೂದಲನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ತಲೆಹೊಟ್ಟು, ಕೂದಲು ಉದುರುವ ಸಮಸ್ಯೆ, ಕೂದಲು ತುಂಡಾಗುವುದು ನಿವಾರಣೆಯಾಗುತ್ತದೆ.