Advertisement

ಸರ್ಕಾರಿ ಬಸ್‌ಗಳಲ್ಲೇ ಸಂಚರಿಸಿ: ಶಾಸಕ ಚಂದ್ರಪ್ಪ

02:42 PM Mar 02, 2021 | Team Udayavani |

ಹೊಳಲ್ಕೆರೆ: ಗ್ರಾಮಾಂತರ ಪ್ರದೇಶಗಳಲ್ಲಿ ಸರಕಾರಿ ಬಸ್‌ಗಳು ಓಡಿಸುವುದು ಆರ್ಥಿಕ ಹಿತದೃಷ್ಟಿಯಿಂದ ತೊಂದರೆ ಎನ್ನುವಂತಾಗಿದ್ದರೂ, ಕ್ಷೇತ್ರದ ಜನರಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಬಸ್‌ ಸೌಲಭ್ಯ ಕಲ್ಪಿಸಿದ್ದು, ಸಾರ್ವಜನಿಕರು ಬೈಕ್‌ಗಳನ್ನು ಬಿಟ್ಟು ಬಸ್‌ಗಳಲ್ಲಿ ಸಂಚರಿಸಬೇಕು ಎಂದು ರಾಜ್ಯ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಹಾಗೂ ಶಾಸಕ, ಎಂ. ಚಂದ್ರಪ್ಪ ತಿಳಿಸಿದರು.

Advertisement

ತಾಲೂಕಿನ ಶಿವಪುರ ಗ್ರಾಮದಲ್ಲಿ ಸೋಮವಾರ ಚಿತ್ರದುರ್ಗ-ದಾವಣಗೆರೆ ಒಳ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಚಿತ್ರದುರ್ಗ ನಗರದಿಂದ ಹೊಳಲ್ಕೆರೆ ತಾಲೂಕಿನ ಶಿವಪುರ, ಮಲ್ಲಾಡಿಹಳ್ಳಿ,ಸಂತೆಬೆನ್ನೂರು ಮಾರ್ಗವಾಗಿ ದಾವಣಗೆರೆ ತಲುಪುವ ಬಸ್‌ಗೆ ಚಾಲನೆ ನೀಡಲಾಗಿದೆ. ನೂತನ ಮಾರ್ಗದಲ್ಲಿ ಸಂಚಾರ ಆರಂಭಿಸಿರುವ ಬಸ್‌ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಸಾರ್ವಜನಿಕರು ಆತಂಕಪಡುವುದು ಬೇಡ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಲ್ಲಿಸಂಚರಿಸುವ ಮೂಲಕ ಸರಕಾರದ ಆದಾಯ ಹೆಚ್ಚಿಸಬೇಕು. ಬೈಕ್‌ಗಳಲ್ಲಿ ಸಂಚರಿಸುವುದನ್ನು ಬಿಟ್ಟುಸರಕಾರಿ ಬಸ್‌ಗಳಲ್ಲಿ ಓಡಾಡುವ ಹವ್ಯಾಸವನ್ನು ಜನರು ಬೆಳೆಸಿಕೊಳ್ಳಬೇಕು ಎಂದರು.

ಹಿರಿಯರ ಮಾತಿನಂತೆ ಹಾಲು ಇದ್ದಾಗ ಹಬ್ಬ ಮಾಡಬೇಕು, ಅಧಿಕಾರ ಇದ್ದಾಗ ಜನರ ಸೇವೆ ಮಾಡಬೇಕು. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡರೇ ಇನ್ನೊಬ್ಬರನ್ನು ಪ್ರಶ್ನೆ ಮಾಡುವನೈತಿಕತೆಯನ್ನು ಕಳೆದುಕೊಳ್ಳುತ್ತೇವೆ. ಅಧಿ ಕಾರ ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ. ಆ ಅರಿವುನಮ್ಮಲ್ಲಿರಬೇಕು. ಅಧಿ ಕಾರ ಇದ್ದಾಗ ಎಷ್ಟು ಬೇಕೋ ಅಷ್ಟು ಲೂಟಿ ಮಾಡಿಕೊಂಡು ಹೋದರೆ ಜನ ಬೇಗ ನಮ್ಮನ್ನು ಮರೆತು ಬಿಡುತ್ತಾರೆ. ಮೊದಲ ಬಾರಿಗೆ ಶಾಸಕನಾಗಿದ್ದಾಗಿನಿಂದಲೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ.

ಮುಂದಿನ ಎರಡು ಕಾಲು ವರ್ಷ ಕೂಡ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತೇನೆಂದರು. ಮಾಜಿ ಶಾಸಕ ಪಿ.ರಮೇಶ್‌, ಮುಖಂಡರಾದ ಪರಮೇಶ್ವರಪ್ಪ, ಪಟ್ಟಣ ಪಂಚಾಯ್ತಿಉಪಾಧ್ಯಕ್ಷ ಕೆ.ಸಿ.ರಮೇಶ್‌ ಸೇರಿದಂತೆ ಹಲವಾರು ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next