Advertisement

ಕಪ್ಪುಹಣದ ವಿರುದ್ಧ ಹೋರಾಡಿ: ಪ್ರಧಾನಿ ಕರೆ

03:45 AM Mar 27, 2017 | |

ನವದೆಹಲಿ: ಕಪ್ಪು ಹಣದ ವಿರುದ್ಧದ ಹೋರಾಟದಲ್ಲಿ ಸಕ್ರಿಯ ಭಾಗಿಗಳಾಗಿ, ಈ ಹೋರಾಟವನ್ನು “ಮುಂದಿನ ಹಂತ’ಕ್ಕೆ ಕೊಂಡೊಯ್ಯುವಂತೆ ಪ್ರಧಾನಿ ನರೇಂದ್ರ ಮೋದಿ, ದೇಶವಾಸಿಗಳನ್ನು ಕೋರಿದ್ದಾರೆ. 

Advertisement

ತಮ್ಮ ಮಾಸಿಕ “ಮನ್‌ ಕಿ ಬಾತ್‌’ ಕಾರ್ಯಕ್ರಮದ ವೇಳೆ ಈ ಮನವಿ ಮಾಡಿದ ಪ್ರಧಾನಿ, ಜನಸಾಮಾನ್ಯರು ತಮ್ಮ ನಿತ್ಯದ ಖರ್ಚುಗಳಿಗೆ ನಗದು ಬದಲಿಗೆ ಡಿಜಿಟಲ್‌ ಪಾವತಿ ವ್ಯವಸ್ಥೆ ಬಳಸುವ ಮೂಲಕ ಕಪ್ಪು ಹಣ ತಡೆಗೆ ಸಹಕರಿಸುವಂತೆ ಕೋರಿದ್ದಾರೆ.

ಹಾಗೇ “”ದೇಶದ 125 ಕೋಟಿ ಭಾರತೀಯರು ಪ್ರತಿಜ್ಞೆ  ಮಾಡಿದರೆ “ನವ ಭಾರತ’ ನಿರ್ಮಾಣ ಸುಲಭ ಸಾಧ್ಯವಾಗಲಿದೆ,” ಎಂದಿದ್ದಾರೆ. “”ಪ್ರಸಕ್ತ ವರ್ಷ 2500 ಕೋಟಿ ರೂ. ಡಿಜಿಟಲ್‌ ಪಾವತಿ ನಡೆಯುವ ನಿರೀಕ್ಷೆಯಿದೆ. ಆದರೆ ನೀವೆಲ್ಲರೂ ಮನಸು ಮಾಡಿದರೆ ಈ ಗುರಿಯನ್ನು ಕೇವಲ 6 ತಿಂಗಳಲ್ಲಿ ತಲುಪಬಹುದು. ಈ ನಿಟ್ಟಿನಲ್ಲಿ ಶಾಲೆ ಶುಲ್ಕ ಪಾವತಿ, ಔಷಧ, ದಿನಸಿ, ತರಕಾರಿ ಖರೀದಿ, ವಿಮಾನ ಹಾಗೂ ರೈಲು ಟಿಕೆಟ್‌ ಕಾಯ್ದಿರಿಸುವಿಕೆ ಸೇರಿದಂತೆ ನಮ್ಮ ನಿತ್ಯದ ವ್ಯವಹಾರಗಳ ವೇಳೆ ಡಿಜಿಟಲ್‌ ಪಾವತಿ ಮಾಡಬೇಕಿದೆ,” ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next