Advertisement

ಸ್ಮಾರ್ಟ್ ಫೋನ್ ಡಾಟಾ ಸೋರಿಕೆ ತಡೆಯಲು ಬಂದಿದೆ ‘USB ಕಾಂಡೋಮ್‘! ಏನಿದರ ವಿಶೇಷತೆ ?

10:20 AM Dec 15, 2019 | Mithun PG |

ನ್ಯೂಯಾರ್ಕ್: ಇಂದು ಜಗತ್ತಿನಾದ್ಯಂತ ಯುಎಸ್ ಬಿ ಕಾಂಡೋಮ್ಸ್ ಎಂಬುದು ಬಹಳ ಪ್ರಸಿದ್ದಿ ಪಡೆಯುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಮಾರ್ಟ್ ಫೋನ್ ಗಳ ಜಾರ್ಜ್ ಖಾಲಿಯಾದ ತಕ್ಷಣ USB ಪೋರ್ಟ್ ಮೂಲಕ ಚಾರ್ಜ್ ಮಾಡುತ್ತೇವೆ. ಆದರೆ ಇಂತಹ ಸ್ಥಳಗಳಲ್ಲಿ ಚಾರ್ಜ್ ಮಾಡುವುದು ಬಹಳ ಅಪಾಯಕಾರಿ. ಆದ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜ್ ಮಾಡುವ ಮೊದಲು ಡಾಟಾ ಬ್ಲಾಕರ್, USB ಕಾಂಡೋಮ್ ಬಳಸಿ ಚಾರ್ಜ್ ಮಾಡುವುದು ಉತ್ತಮ.

Advertisement

ಹೌದು, ಸಾರ್ವಜನಿಕವಾಗಿ ವಯರ್ ಲೆಸ್, ವಯರ್ಡ್ ಇಂಟರ್ ನೆಟ್ ಅಥವಾ USB ಪವರ್ ಚಾರ್ಜಿಂಗ್ ಸ್ಟೇಷನ್ ನಲ್ಲಿ ಮೊಬೈಲ್ ಚಾರ್ಜ್ ಮಾಡುವುದು ಬಹಳ ಅಪಾಯಕಾರಿ. ಇದರಿಂದ ನಮ್ಮ ಖಾಸಗಿ ಡಾಟಾಗಳು ಸೋರಿಕೆಯಾಗುವ ಅಪಾಯಗಳೇ ಹೆಚ್ಚಿರುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಉಚಿತವಾಗಿ ಇಂಟರ್ ನೆಟ್ ಸಿಗುತ್ತದೆಯೆಂದು  ವಿಪಿಎನ್ ಮೂಲಕ  ಲಾಗಿನ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿಗಳು ಹ್ಯಾಕರ್ ಗಳ ಪಾಲಾಗುತ್ತದೆ.

ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮುಂತಾದ ಸ್ಥಳಗಳಲ್ಲಿ ಸ್ಮಾರ್ಟ್ ಫೋನ್ ಚಾರ್ಜ್ ಮಾಡುವವರ ಜಾಗೃತಿಗಾಗಿ USB ಕಾಂಡೋಮ್ ಹೆಸರಿನ ಡಾಟಾ ಬ್ಲಾಕರ್ ಅನ್ನು ಕಂಡುಹಿಡಿಯಲಾಗಿದೆ. ಯಾಕೆಂದರೇ ಇಂತಹ ಸ್ಥಳಗಳಲ್ಲಿ ಯುಎಸ್ ಬಿ ಪೋರ್ಟ್ ಗಳನ್ನು ಬಳಸಿ ಹ್ಯಾಕರ್ ಗಳು ಸೂಕ್ಷ್ಮ ಡೇಟಾವನ್ನು ಕದಿಯಲು ಬಳಸಬಹುದು. ಮಾತ್ರವಲ್ಲದೆ ಮಾಲ್ವೇರ್ ಗಳು ಸ್ಮಾರ್ಟ್ ಫೋನ್ ಗಳನ್ನು ಪ್ರವೇಶಿಸಬಹುದು.

Advertisement

USB ಕಾಂಡೋಮ್ ಎಂಬುದು ಒಂದು ಸಾಮಾನ್ಯ ಡಿವೈಸ್, ಇದು ಚಾರ್ಜಿಂಗ್ ವೇಳೆ ಸೋರಿಕೆಯಾಗುವ ಖಾಸಗಿ ಡಾಟಾವನ್ನು ತಡೆಗಟ್ಟುತ್ತದೆ. ಒಂದು ತೆರನಾದ ಅಡಾಪ್ಟರ್ ನಂತೆ ಕಾಣಿಸುವುದು, ಇದು ಇನ್ ಪುಟ್ ಹಾಗೂ ಔಟ್ ಪುಟ್ ಪೋರ್ಟ್ ಹೊಂದಿದೆ. ಅಮೇರಿಕಾದಲ್ಲಿ ಇದರ ಬೆಲೆ 714 ರೂ. ಇದ್ದರೆ,  ಭಾರತದಲ್ಲಿ 500 ರಿಂದ 1000 ರೂ. ಮುಖಬೆಲೆ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next