Advertisement

ಅಮೆರಿಕದ ವಿರುದ್ಧ ಸೇಡಿಗೆ ಉಸಾಮಾ ಪುತ್ರನ ಸಿದ್ಧತೆ

11:19 AM May 14, 2017 | Team Udayavani |

ವಾಷಿಂಗ್ಟನ್‌: 9/11ರ ಅಮೆರಿಕದ ಅವಳಿ ಕಟ್ಟಡದ ದಾಳಿ ರೂವಾರಿ ಉಸಾಮಾ ಬಿನ್‌ ಲಾಡೆನ್‌ ಪುತ್ರ ಹಮಾl ಅಮೆರಿಕದ ಮೇಲೆ ಸೇಡು ತೀರಿಸಿಕೊಳ್ಳಲು ಸಜ್ಜಾಗುತ್ತಿದ್ದಾನೆ ಎಂದು ಫೆಡರಲ್‌ ಬ್ಯೂರೊ ಆಫ್ ಇನ್ವೆಸ್ಟಿಗೇಷನ್‌ನ ಮಾಜಿ ಸಿಬ್ಬಂದಿಯೊಬ್ಬರು ಬಹಿರಂಗ ಮಾಡಿದ್ದಾರೆ. 

Advertisement

9/11ರ ದಾಳಿ ಬಳಿಕ ಲಾದನ್‌ ವಿರುದ್ಧದ ಕಾರ್ಯಾ ಚರಣೆಯನ್ನು ಮುನ್ನಡೆಸಿದ್ದ ಆಲಿ ಸೌಫಾನ್‌ ಸುದ್ದಿ ವಾಹಿನಿಯೊಂದಕ್ಕೆ ಈ ಮಾಹಿತಿಗಳನ್ನು ನೀಡಿದ್ದಾರೆ. ಲಾದನ್‌ ನ ಹತ್ಯೆ ವೇಳೆ ಆತನ ವೈಯಕ್ತಿಕ ಪತ್ರಗಳನ್ನು ವಶ ಪಡಿಸಿಕೊಳ್ಳಲಾಯಿತು. ಲಾದನ್‌  ಪುತ್ರ ಹಮಾl ತನ್ನ ಅಪ್ಪನ ಸಿದ್ಧಾಂತಧಿಗಳಿಂದ ಬಹುವಾಗಿ ಪ್ರೇರಿತನಾಗಿದ್ದಾನೆ. ಆತ ಅಲ್‌ ಕಾಯಿದಾ ಉಗ್ರ ಸಂಘಟನೆಯನ್ನು ಮುನ್ನಡೆಸಲು ಸಿದ್ಧನಿದ್ದಾನೆ ಎಂಬುದು ಪತ್ರಗಳಿಂದ ತಿಳಿದು ಬಂದಿತ್ತು.

ಈಗ ಆತನಿಗೆ 28 ವರ್ಷ ವಯಸ್ಸು. ಆತನಿಗೆ ಜಿಹಾದಿ ಸಂಘಟನೆಗಳನ್ನು ಒಗ್ಗೂಡಿಸುವುದು ಕಷ್ಟವಾಗಿರುವುದಿಲ್ಲ ಎಂದವರು ಹೇಳಿದ್ದಾರೆ. ಅಲ್ಲದೇ ಹಮಾl ಈ 2 ವರ್ಷಗಳಲ್ಲಿ 2 ಆಡಿಯೋ ಮುದ್ರಿಸಿದ್ದು, ಅಮೆರಿಕಕ್ಕೇ ನೇರ ಎಚ್ಚರಿಕೆ ನೀಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next