Advertisement

ತುರ್ತು ಸಂದರ್ಭದಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಲು ವಿಶ್ವದ ದೊಡ್ಡಣ್ಣ ಗ್ರೀನ್‌ ಸಿಗ್ನಲ್‌

01:17 AM Aug 25, 2020 | mahesh |

ವಾಷಿಂಗ್ಟನ್‌: ಸೋಂಕು ಪೀಡಿತ ರಾಷ್ಟ್ರಗಳಲ್ಲಿ ಅಗ್ರಸ್ಥಾನದಲ್ಲಿರುವ ಅಮೆರಿಕ ಸೋಂಕಿನ ವಿರುದ್ಧದ ಚಿಕಿತ್ಸೆಗೆ ತುರ್ತು ಸಂದರ್ಭದಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಗುಣಮುಖರಾದ ಸೋಂಕಿತ ರೋಗಿಗಳ ರಕ್ತದ ಪ್ಲಾಸ್ಮಾವನ್ನು ವೈದ್ಯರು ತುರ್ತು ಸಂದರ್ಭದಲ್ಲಿ ಮತ್ತೂಬ್ಬ ರೋಗಿಯ ಚಿಕಿತ್ಸೆಗೆ ಬಳಸಲು ಅಮೆರಿಕದ ಅಧಿಕಾರಿಗಳು ಅನುಮತಿ ನೀಡಿದ್ದಾರೆ.

Advertisement

ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಧ್ವಂಸಗೊಳಿಸಿರುವ ಹಾಗೂ ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಎರಡನೇ ಅವಧಿಗೆ ದೇಶದ ಅಧ್ಯಕ್ಷರಾಗುವ ಕನಸು ಕಾಣುತ್ತಿರುವ ಟ್ರಂಪ್‌ ಅವರ ಮೇಲೆ ಮಾರಕ ಸಾಂಕ್ರಾಮಿಕವನ್ನು ನಿಯಂತ್ರಿಸುವ ಬಲುದೊಡ್ಡ ಸವಾಲು ಇರುವ ಸನ್ನಿವೇಶದಲ್ಲಿ, ಫ‌ುಡ್‌ ಆ್ಯಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ ವಿಭಾಗ ಈ ಆದೇಶ ಹೊರಡಿಸಿದೆ.

ಪ್ಲಾಸ್ಮಾದಲ್ಲಿ ಶಕ್ತಿಶಾಲಿ ಆ್ಯಂಟಿಬಾಡಿಗಳಿದ್ದು, ಇದು ಸೋಂಕಿತರು ವೇಗವಾಗಿ ಗುಣಮುಖರಾಗಲು ನೆರವಾಗಲಿದೆ ಹಾಗೂ ರೋಗಿಗಳ ಸ್ಥಿತಿ ಗಂಭೀರವಾಗುವುದನ್ನು ತಡೆಯುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪ್ಲಾಸ್ಮಾ ಕೋವಿಡ್‌ ಚಿಕಿತ್ಸೆಯಲ್ಲಿ ಪರಿಣಾಮಕಾರಿ, ಇದರ ಸಂಭಾವ್ಯ ಪ್ರಯೋಜನಗಳನ್ನು ಮತ್ತು ಅಪಾಯ ಸಾಧ್ಯತೆಯ ನ್ನು ಅಂದಾಜಿಸಲಾಗಿದೆ ಎಂದು ಎಫ್ಡಿಎ ಹೇಳಿಕೆ ನೀಡಿದ್ದು, ಈ ಚಿಕಿತ್ಸಾ ವಿಧಾನವನ್ನು ಹಲವು ದೇಶಗಳಲ್ಲಿ ಅನುಸರಿಸಲಾಗುತ್ತಿದ್ದರೂ, ಇದರ ಪರಿಣಾಮದ ಬಗ್ಗೆ ತಜ್ಞರ ಮಟ್ಟದಲ್ಲಿ ಇನ್ನೂ ಚರ್ಚೆ ಮುಂದುವರಿದಿದೆ.

ಟೋಕಿಯೊ ಪ್ಯಾರಾಲಿಂಪಿಕ್‌ ಮೇಲೆ ಕೊರೊನಾ ಕರಿನೆರಳು
ಟೋಕಿಯೊ: ಎಲ್ಲ ಸರಿ ಇದ್ದರೆ ಸೋಮವಾರ ಟೋಕಿಯೊ ಪ್ಯಾರಾಲಿಂಪಿಕ್‌ ಕ್ರೀಡಾಕೂಟ ಪ್ರಾರಂಭವಾಗಬೇಕಿತ್ತು. ಆದರೆ ಕೋವಿಡ್‌ ಸೋಂಕಿನಿಂದಾಗಿ ಆಗಸ್ಟ್‌ 24 ರಿಂದ ಆರಂಭವಾಗಬೇಕಿದ್ದ ಈ ಕ್ರೀಡಾಕೂಟ ಒಂದು ವರ್ಷಕ್ಕೆ ಮುಂದೂಡಿಕೆಯಾಗಿದೆ.

Advertisement

ಜುಲೈನಿಂದಲೂ ಒಲಿಂಪಿಕ್‌ ಆತಿಥೇಯ ನಗರವಾಗಿರುವ ಟೋಕಿಯೊದಲ್ಲಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಕ್ರೀಡಾಕೂಟದ ಆಯೋಜ ನೆ ಕುರಿತು ಅನಿಶ್ಚಿತತೆ ಕಾಡುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.

ಸೋಂಕು ತ್ವರಿತವಾಗಿ ಹರಡುತ್ತಿದ್ದು, ಮುನ್ನೆಚ್ಚರಿಕೆ ಕ್ರಮದಿಂದ ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಅನ್ನು 2021 ರ ಬೇಸಿಗೆಗೆ ಮುಂದೂಡಲು ಅಂ.ರಾ.ಒಲಿಂಪಿಕ್‌ ಸಮಿತಿ ಮತ್ತು ಸ್ಥಳೀಯ ಸಂಘಟಕರು ಮಾರ್ಚ್‌ ಅಂತ್ಯದಲ್ಲಿ ನಿರ್ಧರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next