Advertisement

ಬಾವಲಿ ಮೂಲಕ ಸೋಂಕು ಸಾಧ್ಯತೆ ಸಂಶೋಧನೆ: ಚೀನಾಕ್ಕೆ 210 ಕೋಟಿ ನೆರವು ನೀಡಿದ ದೊಡ್ಡಣ್ಣ!

11:20 PM Apr 14, 2020 | Hari Prasad |

ಬಾವಲಿ (ಸಸ್ತನಿ) ಮೂಲಕ ಕೋವಿಡ್ ಸೋಂಕು ಹರಡುತ್ತದೆಯೇ ಎಂಬುದರ ಕುರಿತು ಸಂಶೋಧನೆ ನಡೆಸಲು ಚೀನಾಕ್ಕೆ ಅಮೆರಿಕ 210 ಕೋಟಿ ರೂ. (3.7 ಮಿಲಿಯನ್‌ ಡಾಲರ್‌) ನೆರವು ನೀಡಿದೆ. ವಿಶ್ವದಲ್ಲೇ ಚೀನಾದಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಅದರಲ್ಲೂ ವೂಹಾನ್‌ ನಗರವೇ ಕೇಂದ್ರಿತವಾಗಿತ್ತು.

Advertisement

ವೂಹಾನ್‌ನ ರೋಗ ಸೂಕ್ಷ್ಮಾಣು ಶಾಸ್ತ್ರಗಳ ಸಂಶೋಧನೆ ಸಂಸ್ಥೆಯು ಇಲ್ಲಿನ ಯುನ್ನಾನ್‌ನ ಗುಹೆಗಳಲ್ಲಿರುವ ಬಾವಲಿಗಳಿಂದ ಸೋಂಕು ಹರಡುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಅಧ್ಯಯನವನ್ನು ಅಮೆರಿಕ ನೆರವಿನೊಂದಿಗೆ ಕೈಗೊಂಡಿದೆ. ಅಮೆರಿಕ ರಾಷ್ಟ್ರೀಯ ಆರೋಗ್ಯ ಸಂಸ್ಥೆಯೇ ಇದಕ್ಕೆ ಶಿಫಾರಸು ಮಾಡಿದೆ ಎಂದು ‘ಡೈಲಿ ಮೇಲ್‌’ ವರದಿ ಮಾಡಿದೆ.

ವೂಹಾನ್‌ನ ರೋಗ ಸೂಕ್ಷ್ಮಾಣು ಸಂಶೋಧನೆ ಸಂಸ್ಥೆ ಚೀನಾದಲ್ಲೇ ಅತ್ಯಾಧುನಿಕ ಪ್ರಯೋಗಾಲಯವಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಬಾಧಿತ ದೇಶವಾಗಿರುವ ಅಮೆರಿಕ, ಚೀನಾಕ್ಕೆ ಇಷ್ಟು ಮೊತ್ತದ ನೀಡಿರುವುದಕ್ಕೆ ಅಮೆರಿದಲ್ಲೇ ವಿರೋಧ ವ್ಯಕ್ತವಾಗಿದೆ. ಇದೊಂದು ಕೆಟ್ಟ ನಿರ್ಧಾರವಾಗಿದ್ದು, ಈ ಹಣದಿಂದ ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡಬಹುದಿತ್ತು ಎಂದು ನೀತಿ ನಿರೂಪಕರು, ತಜ್ಞರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next