Advertisement

ಶ್ವಾನ ಸೇರಿದಂತೆ ಮಕ್ಕಳ ಆಶ್ಲೀಲ ವಿಡಿಯೋ ಚಿತ್ರೀಕರಣ: ಅಸಭ್ಯ ವರ್ತನೆಯ ಮಹಿಳೆ ಬಂಧನ

12:10 PM Jul 31, 2023 | Team Udayavani |

ವಾಷಿಂಗ್ಟನ್‌: ಮಕ್ಕಳ ಅಶ್ಲೀಲ ವಿಡಿಯೋ  ಡೌನ್ಲೋಡ್‌ ಮಾಡಿದ ಹಾಗೂ ನಾಯಿಯೊಂದಿಗೆ ಅಸ್ವಾಭಾವಿಕ ದೈಹಿಕ ದೌರ್ಜನ್ಯ  ನಡೆಸಿ ಅದನ್ನು  ಚಿತ್ರೀಕರಿಸಿದ ಆರೋಪದ ಮೇಲೆ ಬಂದ ದೂರಿನ ಹಿನ್ನೆಲೆಯಲ್ಲಿ ಅಮೆರಿಕಾದ ಟೆನ್ನೆಸ್ಸೀ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

Advertisement

ಸ್ಟೆಫನಿ ವೀರ್ (33) ಬಂಧಿತ ಮಹಿಳೆಯಾಗಿದ್ದಾಳೆ. ಸ್ಟೆಫನಿ ವೀರ್  ಡಿಜಿಟಲ್ ಕ್ಲೌಡ್ ಖಾತೆಯಲ್ಲಿ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಡೌನ್‌ ಲೋಡ್‌ ಮಾಡಿದ ಈಕೆ  ಶ್ವಾನದ ಜೊತೆ ಅಸ್ವಾಭಾವಿಕ ದೈಹಿಕ ದೌರ್ಜನ್ಯ ನಡೆಸುತ್ತಿರುವ ವೀಡಿಯೊವನ್ನು ಚಿತ್ರೀಕರಿಸಿದ್ದಾಳೆ. ಇದಲ್ಲದೇ ಈಕೆ ಅಂಬೆಗಾಲಿಡುವ ಮಗುವಿನ ನಗ್ನ ಫೋಟೋವನ್ನು ಸೆರೆ ಹಿಡಿಯುತ್ತಿದ್ದಳು. ಲೈಂಗಿಕ ದೌರ್ಜನ್ಯದ ವೀಡಿಯೊಗಳು ಮತ್ತು ಚಿತ್ರಗಳನ್ನು ಸಂಗ್ರಹಿಸಿರುವುದಾಗಿ ʼ ಡೈಲಿ ಮೇಲ್ʼ ವರದಿ ತಿಳಿಸಿದೆ.

ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ(National Center for Missing and Exploited Children) ಮೆಂಫಿಸ್ ಪೊಲೀಸರಿಗೆ ಈಕೆಯ ಅಪರಾಧದ ಬಗ್ಗೆ ದೂರು ನೀಡಿದೆ.

ಅಫಿಡವಿಟ್ ಪ್ರಕಾರ ನ್ಯೂಜೆರ್ಸಿ ಮೂಲದ ಸಿಂಕ್ರೊನಾಸ್ ಟೆಕ್ನಾಲಜೀಸ್ ಇಂಕ್ ಎಂಬ ಟೆಕ್ ಸಂಸ್ಥೆಯು ತಮ್ಮ ಖಾತೆಯಲ್ಲಿ ‘ಮಕ್ಕಳ ಅಶ್ಲೀಲತೆ’ ಹೊಂದಿರುವ ವ್ಯಕ್ತಿಯ ಮೇಲೆ ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ NCMEC ನಿಂದ ದೂರು ಬಂದಿದೆ ಎಂದು ವರದಿ ತಿಳಿಸಿದೆ.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆ ಬಳಿಕ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಪೊಲೀಸರು ವೀರ್‌ನ ಸೆಲ್‌ಫೋನ್‌ ಪರಿಶೀಲಿಸಿದಾಗ, ಆಕೆಯ ಫೋನಿನಲ್ಲಿ ಅನೇಕ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.

Advertisement

ಸ್ಟೆಫನಿ ವೀರ್ ಮಕ್ಕಳ ಆಶ್ಲೀಲತೆಯ ಬಗ್ಗೆ ಹುಡುಕಲು ಸಾಮಾಜಿಕ ಜಾಲತಾಣದಲ್ಲಿ ಕೆಲ ಗುಂಪುಗಳನ್ನು ಹೊಂದಿದ್ದಳು. ಅದರ ಸಂಪರ್ಕದಿಂದ ಇಂಥ ವಿಡಿಯೋಗಳನ್ನು ಹುಡುಕುತ್ತಿದ್ದಳು ಎಂದು ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾಳೆ.

ಅಂಬೆಗಾಲಿಡುವ ಮಕ್ಕಳ ನಗ್ನ ಚಿತ್ರವನ್ನು ತೆಗೆದು ಬೇರೊಬ್ಬ ವ್ಯಕ್ತಿಗೆ ಕಳುಹಿಸುತ್ತಿದ್ದಳು ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ. ಸೋಮವಾರ(ಜು.31) ಆಕೆಯನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ವರದಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next