Advertisement
ಪಾಕಿಸ್ತಾನ, ಭಾರತ ಮತ್ತು ಅಮೆರಿಕ ಪ್ರವಾಸ ನಡೆಸಿದ್ದ ಅಮೆರಿಕ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್‌ಸನ್ ಜಿನೀವಾದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. “”ನಾವು ಪಾಕಿಸ್ತಾನದಿಂದ ಏನನ್ನೂ ಬಯಸುತ್ತಿಲ್ಲ. ಆದರೆ, ನಾವು ಆ ದೇಶದಲ್ಲಿರುವ ಉಗ್ರರ ಬಗ್ಗೆ ಮಾಹಿತಿಯನ್ನೂ ನೀಡಿದ್ದೇವೆ. ಈ ಮಾಹಿತಿಯಂತೆ ಉಗ್ರರ ವಿರುದ್ಧ ಪಾಕ್ ಕ್ರಮ ಕೈಗೊಳ್ಳಬೇಕು ಬಯಸುತ್ತೇವೆ. ಆದರೆ ನೀವೇನು ಮಾಡಬೇಕು ಎಂಬುದನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲೇ ಇದೆ. ನೀವು ಈ ಕ್ರಮ ಕೈಗೊಳ್ಳದಿದ್ದರೆ ನಮ್ಮ ವ್ಯೂಹಗಳನ್ನು ನಾವು ಬದಲಿಸಿ, ವಿಭಿನ್ನ ವಿಧಾನದಲ್ಲಿ ನಾವು ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಟಿಲ್ಲರ್‌ಸನ್ ಹೇಳಿದ್ದಾರೆ.
Related Articles
ಅಮೆರಿಕದ ಎಚ್ಚರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಪಾಕ್ ವಿದೇಶಾಂಗ ಸಚಿವ ಖ್ವಾಜಾ ಅಸಿಫ್, ಅಮೆರಿಕಕ್ಕೆ ನಾವು ಶರಣಾಗುವುದೂ ಇಲ್ಲ. ನಮ್ಮ ಏಕಸ್ವಾಮ್ಯತೆಯೊಂದಿಗೆ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ. ಯಾವುದೇ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ನಮಗೆ ಅಮೆರಿಕ ಸೂಚನೆ ನೀಡಿಲ್ಲ ಎಂದು ಹೇಳಿದ್ದಾರೆ.
Advertisement
75 ಉಗ್ರರ ಪಟ್ಟಿ: ಹಕ್ಕಾನಿ ಉಗ್ರ ಸಂಘಟನೆ ಹಾಗೂ ಇತರ ಉಗ್ರ ಸಂಘಟನೆಗಳ 75 ಉಗ್ರರ ಪಟ್ಟಿಯನ್ನು ಅಮೆರಿಕ ನೀಡಿದೆ. ಈ ಉಗ್ರರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕ ಆಗ್ರಹಿಸಿದೆ. ಆದರೆ ಪಾಕಿಸ್ತಾನ ಮಾತ್ರ ಅಮೆರಿಕ ಇಂಥ ಯಾವುದೇ ಉಗ್ರರ ಪಟ್ಟಿಯನ್ನು ನೀಡಿಲ್ಲ ಎಂದು ವಾದಿಸುತ್ತಿದೆ.