Advertisement

US: ಅಮೆರಿಕ ಚುನಾವಣೆ: ನೆವಾಡಾ ಪ್ರೈಮರಿಯಲ್ಲಿ ಗೆದ್ದ ಡೊನಾಲ್ಡ್‌ ಟ್ರಂಪ್‌

07:51 PM Feb 09, 2024 | Pranav MS |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವವಣೆ ಬಿರುಸು ಪಡೆದುಕೊಂಡಿದ್ದು, ನೆವಾಡಾ ಪ್ರೈಮರಿಯಲ್ಲಿ ರಿಪಬ್ಲಿಕನ್‌ ಪಕ್ಷದ ನಾಯಕ, ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆಲುವು ಸಾಧಿಸಿದ್ದಾರೆ. ಮಹತ್ವದ ಬೆಳವಣಿಗೆಯೆಂದರೆ ಅಲ್ಲಿ ಟ್ರಂಪ್‌ ಪ್ರತಿಸ್ಪರ್ಧಿ ನಿಕ್ಕಿ ಹ್ಯಾಲೆ ಅಲ್ಲಿ ಸ್ಪರ್ಧಿಸಿರಲಿಲ್ಲ ಎಂದು ಹೇಳಲಾಗಿದೆ.

Advertisement

ನೆವಾಡಾದ ಗೆಲುವು ಟ್ರಂಪ್‌ಗೆ 26 ಪ್ರತಿನಿಧಿಗಳ ಬಲವನ್ನು ನೀಡಲಿದೆ. 1215 ಪ್ರತಿನಿಧಿಗಳ ಬೆಂಬಲವನ್ನು ಪಡೆದಲ್ಲಿ ಡೊನಾಲ್ಡ್‌ ಟ್ರಂಪ್‌ ರಿಪಬ್ಲಿಕನ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಬಹುದಾ. ಫೆ.24ರಂದು ನಿಕ್ಕಿ ಹ್ಯಾಲೆ ಸ್ವಕ್ಷೇತ್ರ ದಕ್ಷಿಣ ಕೆರೊಲಿನಾದಲ್ಲಿ ಮುಂದಿನ ಹಂತದ ಚುನಾವಣೆ ನಡೆಯಲಿದೆ. ಭಾರೀ ಕುತೂಹಲ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next