Advertisement

US; ಕಟಕಟೆಯಲ್ಲೇ ಜಡ್ಜ್ ಜತೆ ಟ್ರಂಪ್‌ ಜಗಳ!

01:06 AM Nov 08, 2023 | Team Udayavani |

ನ್ಯೂಯಾರ್ಕ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿಚಾರಣೆ ವೇಳೆ ಕಟಕಟೆಯಿಂದಲೇ ನ್ಯಾಯಾಧೀಶರು ಮತ್ತು ನ್ಯೂಯಾರ್ಕ್‌ ಅಟಾರ್ನಿ ಜನರಲ್‌ ವಿರುದ್ಧವೇ ಕೂಗಾಡಿದ್ದಾರೆ. ವಂಚನೆ ಪ್ರಕರಣದ ವಿಚಾರಣೆ ವೇಳೆ ಈ ಘಟನೆ ನಡೆದಿದೆ. ಬಹು ಹೊತ್ತಿನ ವರೆಗೆ ತಾಳ್ಮೆಯಿಂದ ಟ್ರಂಪ್‌ ಮಾತುಗಳನ್ನು ಆಲಿಸುತ್ತಿದ್ದ ನ್ಯಾ| ಆರ್ಥರ್‌ ಎನ್‌ಗೊರೊನ್‌ “ಇದು ರಾಜಕೀಯ ರ್ಯಾಲಿ ಅಲ್ಲ. ವಕೀಲರು ಕೇಳಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ’ ಎಂದು ಕಟುವಾಗಿ ಹೇಳಿದರು. ಈ ವೇಳೆ ಟ್ರಂಪ್‌ ಮಿತಿ ಮೀರಿ ಮಾತನಾಡುತ್ತಿದ್ದರು. ಇದನ್ನು ನೋಡಿ, “ನಿಮ್ಮ ಕಕ್ಷಿದಾರರನ್ನು ಎಚ್ಚರಿಕೆಯಿಂದ ವರ್ತಿಸಲು ಹೇಳಿ’ ಎಂದು ವಕೀಲರಿಗೆ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next