Advertisement
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ಮಂಗಳವಾರ ಉನ್ನತ ಅಧಿಕಾರಿಗಳು ಮತ್ತು ತೈಲ ಮಾರುಕಟ್ಟೆ ಕಂಪೆನಿಗಳ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭಾರತವು ಸುಮಾರು 3.80 ಕೋಟಿ ಬ್ಯಾರಲ್ ಕಚ್ಚಾತೈಲವನ್ನು ಪಾದೂರು ಸಹಿತ ಪಶ್ಚಿಮ ಮತ್ತು ಪೂರ್ವ ಕರಾವಳಿಯಲ್ಲಿರುವ ಮೂರು ಸಂಗ್ರಹಾಗಾರಗಳಲ್ಲಿ ಮೀಸಲು ದಾಸ್ತಾನು ಆಗಿ ಇರಿಸಿದೆ. ಈ ಪೈಕಿ 50 ಲಕ್ಷ ಬ್ಯಾರಲ್ ತೈಲ ಬಿಡುಗಡೆ ಪ್ರಕ್ರಿಯೆಯನ್ನು ಮುಂದಿನ 7-10 ದಿನಗಳಲ್ಲೇ ಆರಂಭಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದಾಸ್ತಾನನ್ನು ಎಂಆರ್‌ಪಿಎಲ್ ಮತ್ತು ಎಚ್‌ಪಿಸಿಎಲ್‌ಗೆ ಮಾರಾಟ ಮಾಡಲಾಗುತ್ತದೆ. ಇದನ್ನೂ ಓದಿ:ನ.27ಕ್ಕೆ ಕರ್ನಾಟಕ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಜಿಎಸ್‌ಟಿ ಸಭೆ
Related Articles
ಅಮೆರಿಕವು ತನ್ನ ಮೀಸಲು ದಾಸ್ತಾನಿನಿಂದ 50 ಕೋಟಿ ಟನ್ ಮೀಸಲು ಕಚ್ಚಾತೈಲ ಬಿಡುಗಡೆ ಮಾಡಲಿದೆ. ಜಪಾನ್ ಪ್ರಧಾನಿ ಈಗಾಗಲೇ ಈ ಬಗ್ಗೆ ಉತ್ಸುಕತೆ ಪ್ರದರ್ಶಿಸಿದ್ದು, ಸದ್ಯವೇ ಇಂಥದೇ ಹೆಜ್ಜೆ ಇರಿಸಲಿದ್ದಾರೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಜಾಗತಿಕ ಕಚ್ಚಾ ತೈಲ ಬೆಲೆಗಳು ಇಳಿಕೆ ಕಂಡಿವೆ. ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತೀ ಬ್ಯಾರಲ್‌ಗೆ 67 ಸೆಂಟ್ಸ್ ಇಳಿಕೆಯಾಗಿ 79.03 ಡಾಲರ್‌ಗೆ ತಗ್ಗಿದರೆ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೆಟ್ ತೈಲ ಬೆಲೆ ಪ್ರತೀ ಬ್ಯಾರಲ್‌ಗೆ 88 ಸೆಂಟ್ಸ್ ತಗ್ಗಿ 75.87 ಡಾಲರ್‌ಗೆ ಇಳಿದಿದೆ.
Advertisement