Advertisement

ಮೆಕ್ಸಿಕೋ ಗಡಿಯಿಂದ ಅಕ್ರಮ ಪ್ರವೇಶ: ಅಮೆರಿಕದಿಂದ 161 ಭಾರತೀಯರ ಗಡಿಪಾರು

08:16 AM May 19, 2020 | Nagendra Trasi |

ವಾಷಿಂಗ್ಟನ್:ದಕ್ಷಿಣ ಗಡಿಭಾಗವಾದ ಮೆಕ್ಸಿಕೋದಿಂದ ಕಾನೂನು ಬಾಹಿರವಾಗಿ ದೇಶದೊಳಕ್ಕೆ ಆಗಮಿಸಿದ್ದ ಸುಮಾರು 161 ಭಾರತೀಯ ಪ್ರಜೆಗಳನ್ನು ಅಮೆರಿಕ ಈ ವಾರ ಗಡಿಪಾರು ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

ಗಡಿಪಾರಾದ ಎಲ್ಲರನ್ನು ವಿಶೇಷ ವಿಮಾನದಲ್ಲಿ ಪಂಜಾಬ್ ನ ಅಮೃತ್ ಸರಕ್ಕೆ ಕಳುಹಿಸಲಾಗಿದೆ. ಹರ್ಯಾಣದ 76 ಮಂದಿ, ಪಂಜಾಬ್ ನ 56, ಗುಜರಾತ್ ನ 12, ಉತ್ತರಪ್ರದೇಶದ 5, ಮಹಾರಾಷ್ಟ್ರದ 4, ಕೇಳ, ತೆಲಂಗಾಣ, ತಮಿಳುನಾಡಿನ ತಲಾ ಇಬ್ಬರು ಹಾಗೂ ಆಂಧ್ರಪ್ರದೇಶ ಮತ್ತು ಗೋವಾದ ಒಬ್ಬರನ್ನು ಗಡಿಪಾರು ಮಾಡಲಾಗಿದೆ.

ಅಕ್ರಮವಾಗಿ ಅಮೆರಿಕದೊಳಕ್ಕೆ ಪ್ರವೇಶಿಸಿದ್ದ 1,739 ಭಾರತೀಯರು ಅಮೆರಿಕದ 95 ಜೈಲುಗಳಲ್ಲಿ ಇದ್ದಿರುವುದಾಗಿ ಉತ್ತರ ಅಮೆರಿಕನ್ ಪಂಜಾಬಿ ಅಸೋಸಿಯೇಷನ್(ಎನ್ ಎಪಿಎ)ನ ಕಾರ್ಯಕಾರಿ ನಿರ್ದೇಶಕ ಸಟ್ನಾಮ್ ಸಿಂಗ್ ತಿಳಿಸಿದ್ದಾರೆ.

ಐಸಿಇ (ಇಮಿಗ್ರೇಶನ್ ಆ್ಯಂಡ್ ಕಸ್ಟಮ್ಸ್ ಎನ್ ಫೋರ್ಸ್ ಮೆಂಟ್) ವರದಿ ಪ್ರಕಾರ, 2018ರಲ್ಲಿ ಅಮೆರಿಕ 611 ಭಾರತೀಯರನ್ನು ಗಡಿಪಾರು ಮಾಡಿತ್ತು. ಈ ವರ್ಷ ಗಡಿಪಾರು ಮಾಡಿದ 161 ಮಂದಿಯಲ್ಲಿ ಮೂವರು ಮಹಿಳೆಯರು ಸೇರಿರುವುದಾಗಿ ಎನ್ ಎಪಿಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next