Advertisement

ಅಮೆರಿಕಕ್ಕೆ ಅಫ್ಘಾನಿಸ್ಥಾನದಲ್ಲಿ ಎಲ್‌ಇಟಿ ಅತೀ ದೊಡ್ಡ ಬೆದರಿಕೆ: ಪೆಂಟಗನ್‌

10:00 AM May 25, 2019 | Team Udayavani |

ವಾಷಿಂಗ್ಟನ್‌ : ಸಮರತ್ರಸ್ತ ಅಫ್ಘಾನಿಸ್ಥಾನದಲ್ಲಿರುವ ಅಮೆರಿಕ ಮತ್ತು ಅದರ ಮಿತ್ರಪಡೆಗಳಿಗೆ ಪಾಕ್‌ ಮೂಲದ ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆಯು ಅತೀ ದೊಡ್ಡ ಬೆದರಿಕೆಯಾಗಿದೆ ಎಂದು ಪೆಂಟಗನ್‌ ಹೇಳಿದೆ.

Advertisement

ಅಫ್ಘಾನಿಸ್ಥಾನದಲ್ಲಿ ಕನಿಷ್ಠ 300 ಎಲ್‌ಇಟಿ ಉಗ್ರರು ಸಕ್ರಿಯರಾಗಿದ್ದಾರೆ ಎಂದು ಪೆಂಟಗನ್‌ ಹೇಳಿದೆ.

ಅಮೆರಿಕ ಮತ್ತು ವಿಶ್ವಸಂಸ್ಥೆಯಿಂದ ನಿಷೇಧಕ್ಕೆ ಗುರಿಯಾಗಿರುವ ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆ 2008ರ ಮುಂಬಯಿ ದಾಳಿಗೆ ಕಾರಣವಾಗಿದ್ದು ಆ ದಾಳಿಯಲ್ಲಿ ಅದು 166 ಮಂದಿಯನ್ನು ಬಲಿಪಡೆದಿತ್ತು.

ಪೆಂಟಗನ್‌ ಹೇಳಿರುವ ಪ್ರಕಾರ ಅಫ್ಘಾನಿಸ್ಥಾನದಲ್ಲಿ 20 ಪ್ರಮುಖ ಉಗ್ರ ಸಂಘಟನೆಗಳು ಸಕ್ರಿಯವಾಗಿವೆ; ಇವುಗಳ ಪೈಕಿ ಲಷ್ಕರ್‌ ಎ ತಯ್ಯಬ ಅತ್ಯಧಿಕ ಉಗ್ರರನ್ನು ಹೊಂದಿರುತ್ತಾ ಅಲ್‌ ಕಾಯಿದಾ ಮತ್ತು ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್ ಉಜ್ಬೆಕಿಸ್ಥಾನ್‌ ಜತೆಗೆ ಐದನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next