Advertisement

ಅಮೆರಿಕದಲ್ಲಿ ಒಂದೇ ದಿನ 1,303 ಬಲಿ: ಜಗತ್ತಿನಾದ್ಯಂತ 30ಲಕ್ಷ ದಾಟಿದ ಸೋಂಕಿತರ ಸಂಖ್ಯೆ

09:48 AM Apr 29, 2020 | Mithun PG |

ವಾಷಿಂಗ್ಟನ್: ಅಮೆರಿಕಾದಲ್ಲಿ ಕೋವಿಡ್ -19 ಮರಣ ಮೃದಂಗ ಮುಂದುವರೆದಿದ್ದು  ಕಳೆದ 24 ಗಂಟೆಗಳ ಅವಧಿಯಲ್ಲಿ 1,303 ಜನರು ಮೃತಪಟ್ಟಿದ್ದಾರೆಂದು ಜಾನ್ಸ್ ಹಾಫ್ ಕಿನ್ಸ್ ಯುನಿವರ್ಸಿಟಿ ತಿಳಿಸಿದೆ.

Advertisement

ಕಳೆದ ಹಲವು ದಿನಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಇಳಿಕೆಯಾಗುತ್ತಾ ಬರುತ್ತಿದ್ದು, ಈವರೆಗೂ ದೇಶದಲ್ಲಿ 56, 255 ಜನರು ಮೃತಪಟ್ಟಿದ್ದಾರೆ. ವೈರಾಣು ಪೀಡಿತರ ಪ್ರಮಾಣದಲ್ಲೂ ಏರಿಕೆಯಾಗಿದ್ದು ಒಟ್ಟಾರೆಯಾಗಿ 10,10,356 ಜನರು ಸೋಂಕಿನಿಂದ ಬಳುತ್ತಿದ್ದಾರೆ. ಗಮನಾರ್ಹ ಸಂಗತಿಯೆಂದರೇ ಈ ದೇಶದಲ್ಲಿ ವೈರಸ್ ಪೀಡಿತರಾಗಿದ್ದು ಸುಮಾರು 1,38,989 ಮಂದಿ ಗುಣಮುಖರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಅಮೆರಿಕಾದ ನಂತರ ಸ್ಪೇನ್ ನಲ್ಲಿ ಅತೀ ಹೆಚ್ಚು ಸೋಂಕಿತರಿದ್ದು(229,422)  23, 521 ಜನರು ಸಾವನ್ನಪ್ಪಿದ್ದಾರೆ. ಇಟಲಿಯಲ್ಲೂ ಕೂಡ 199,414 ಪ್ರಕರಣಗಳು ದಾಖಲಾಗಿದ್ದು 26, 977 ಜನರು ಕೊನೆಯುಸಿರೆಳೆದಿದ್ದಾರೆ.

ಜಗತ್ತಿನಾದ್ಯಂತ ಸುಮಾರು 30, 64,255 ಜನರು ಸೋಂಕಿನಿಂದ ಬಳುತ್ತಿದ್ದು 2,11,537 ಜನರು ಬಲಿಯಾಗಿದ್ದಾರೆ. 9 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next