Advertisement

ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಉಂಟಾದರೆ ಭಾರತಕ್ಕೂ ಆತಂಕ

11:46 PM Jun 23, 2022 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ 40 ವರ್ಷಗಳಲ್ಲಿ ಗರಿಷ್ಠ ಪ್ರಮಾಣದ ಹಣದುಬ್ಬರ ಏರಿಕೆಯಾಗಿದೆ. ಒಂದು ವೇಳೆ, ಆ ದೇಶದಲ್ಲಿ ಆರ್ಥಿಕ ಕುಸಿತ ಉಂಟಾದರೆ, ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆಯ ಮೇಲೆ ಮಧ್ಯಮ ಪ್ರಮಾಣದಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಅಮೆರಿಕದ ಸಂಶೋಧನ ಸಂಸ್ಥೆ ನೋಮುರಾ ಅಭಿಪ್ರಾಯಪಟ್ಟಿದೆ.

Advertisement

ನೊಮುರಾದ ಅಭಿಪ್ರಾಯ ಪ್ರಕಾರ, ದೇಶದ ಅರ್ಥ ವ್ಯವಸ್ಥೆ ಕೊರೊನಾ ಶುರುವಾಗುವುದಕ್ಕಿಂತ ಮೊದಲಿನ ಹಂತಕ್ಕೆ ತಲುಪುತ್ತಿದೆ. ಸೇವಾ ಕ್ಷೇತ್ರ ಶೇ.4ಕ್ಕೆ ಕುಸಿತ ಕಂಡದ್ದು, ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಶೇ.40ಕ್ಕೆ ಏರಿಕೆಯಾಗಿದೆ. ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿ ಕೂಡ ಅಲ್ಪ ಪ್ರಮಾಣದಲ್ಲಿ ಕುಸಿತ ಅನುಭವಕ್ಕೆ ಬರಬಹುದು. ಅದರ ಋಣಾತ್ಮಕ ಪರಿಣಾಮ ಭಾರತದ ಅರ್ಥ ವ್ಯವಸ್ಥೆ ಮೇಲೆ ಕೊಂಚ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿ ಹಾಲಿ ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ ಕೊಂಚ ಹಿಂಜರಿಕೆ ಕಂಡು ಬರಬಹುದು ಎಂದು ಅದು ವ್ಯಾಖ್ಯಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next