Advertisement
ಡೆಲವೇರ್‌ನಲ್ಲಿ ಮಾತನಾಡಿದ ಅವರು, ನಮ್ಮ ವೈರಿಗಳಿಂದ ಎದುರಾ ಗುವ ಸವಾಲು ಎದುರಿಸಲು ಸಿದ್ಧರಿ ದ್ದೇವೆ. ಜತೆಗೆ ಮಿತ್ರರನ್ನೂ ತಿರಸ್ಕರಿಸಲು ಸಿದ್ಧರಾಗಿಲ್ಲ. ಜತೆಗೆ ನಮ್ಮ ಮೌಲ್ಯಗಳನ್ನು ಎತ್ತಿ ಹಿಡಿಯಲೂ ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ. ಜಗತ್ತಿನ ಹಲವು ನಾಯಕರು ಇದನ್ನೇ ಬಯಸುತ್ತಿದ್ದಾರೆ. ಫೆಸಿಫಿಕ್‌ನಿಂದ ಅಟ್ಲಾಂಟಿಕ್ ವರೆಗೆ ಮತ್ತು ಜಗತ್ತಿನಾದ್ಯಂತ ಇದೇ ಅಭಿಪ್ರಾ ಯವಿದೆ ಎಂದು ಬೈಡೆನ್ ಪ್ರತಿಪಾದಿ ಸಿದರು. ಇದೇ ಕಾರ್ಯಕ್ರಮದಲ್ಲಿ ತಮ್ಮ ನೇತೃತ್ವದ ಸಚಿವ ಸಂಪುಟದಲ್ಲಿ ಅಧಿಕಾರ ನಡೆಸಲಿರುವ ಆರು ಮಂದಿಯನ್ನೂ ಅವರು ಪರಿಚಯಿಸಿದರು. ಇಂಥ ಸಂಕಷ್ಟಮಯ ಸಂದರ್ಭದಲ್ಲಿ ಆಡಳಿತದ ಹೊಸ ತಂಡದ ಜತೆಗೆ ಭೇಟಿಯಾಗುವುದು ಮಹತ್ವ ಪಡೆದಿದೆ ಎಂದರು ಬೈಡೆನ್. ಮೈತ್ರಿ ರಾಷ್ಟ್ರಗಳ ಜತೆಗೆ ಹೊಸ ತಂಡದ ಜತೆಗೆ ಕೆಲಸ ಮಾಡುವ ವೇಳೆ ನಾನು ಹೊಂದಿರುವ ನಂಬುಗೆಯಂತೆ ಕೆಲಸ ಮಾಡಲಿದ್ದಾರೆ ಎಂಬ ನಂಬುಗೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ಗೆ ಚೀನ ಅಧ್ಯಕ್ಷ ಜೋ ಬೈಡೆನ್ ಬುಧವಾರ ಅಭಿನಂದನೆ ಸಲ್ಲಿಸಿದ್ದಾರೆ. ಎರಡೂ ದೇಶಗಳ ನಡುವೆ ಮುಂದಿನ ದಿನಗಳಲ್ಲಿ ಸಂಘರ್ಷ ರಹಿತ ವಾತಾವರಣದಲ್ಲಿ ಬಾಂಧವ್ಯ ಇರುವಂತಾಗಲಿ ಎಂದು ಹಾರೈಸಿದ್ದಾರೆ. ಇದರಿಂದಾಗಿ ಎರಡೂ ದೇಶಗಳ ಜನರಿಗೆ ಅನುಕೂಲವಾಗಿಯೂ ಪರಿಣಮಿಸಲಿದೆ. ಚೀನ ಉಪಾಧ್ಯಕ್ಷ ವಾಂಗ್ ಕ್ವಿಶಾನ್ ಕೂಡ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರಿಗೆ ಅಭಿನಂದನೆಯ ಸಂದೇಶ ನೀಡಿದ್ದಾರೆ. ರೊಹಾನಿಗೆ ವಿಶ್ವಾಸ:
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ಇದ್ದ ಇರಾನ್ ಬಗೆಗಿನ ಅಮೆರಿಕದ ನಿಲುವನ್ನು ಬೈಡೆನ್ ಮುಂದುವರಿಸಲಿದ್ದಾರೆ ಎಂದು ಅಲ್ಲಿನ ಅಧ್ಯಕ್ಷ ಹಸನ್ ರೊಹಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2017 ಜ.20ರಿಂದ ಮೊದಲು ಅಂದರೆ ಬರಾಕ್ ಒಬಾಮ ಅವಧಿಯಲ್ಲಿ ಜಾರಿಯಾಗಿದ್ದ ಪರಮಾಣು ಒಪ್ಪಂದ ಮತ್ತೆ ಜಾರಿಯಾದರೆ ಎಲ್ಲಾ ಸಮಸ್ಯೆಗಳೂ ಬಗೆ ಹರಿಯುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.