Advertisement
ಹೊಸ ವರ್ಷದ ಮೊದಲ ದಿನದಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ಥಾನವನ್ನು ತೀವ್ರ ಟೀಕಿಸಿ ಟ್ವೀಟ್ ಮಾಡಿದ್ದರು. ನಂತರ ಪಾಕಿಸ್ಥಾನಕ್ಕೆ ನೀಡಬೇಕಿದ್ದ 2 ಕೋಟಿ ಡಾಲರ್ (10 ಸಾವಿರ ಕೋಟಿ ರೂ.) ಅನುದಾನವನ್ನೂ ಟ್ರಂಪ್ ಸರಕಾರ ತಡೆಹಿಡಿದಿತ್ತು. ಇದು ಪಾಕಿಸ್ಥಾನವನ್ನು ಇನ್ನಷ್ಟು ವ್ಯಗ್ರವಾಗಿಸಿತ್ತು. ಅಮೆರಿಕದ ಶ್ವೇತಭವನದ ಅಧಿಕಾರಿಗಳು ಹೇಳುವಂತೆ ಪಾಕಿಸ್ಥಾನ ಅಥವಾ ಅಪಾ^ನಿಸ್ತಾನವನ್ನು ಉಗ್ರರ ಸ್ವರ್ಗವಾಗಲು ಬಿಡುವುದಿಲ್ಲ. ಪಾಕ್‌ನಲ್ಲಿರುವ ಉಗ್ರರು ಈಗಾಗಲೇ ಈ ಭಾಗದ ಶಾಂತಿ ಕದಡಿವೆ. ಈ ಹಿಂದೆ ಕೆರ್ರಿ ಲುಗಾರ್ ಬರ್ಮನ್ ಮಸೂದೆಯಡಿ 15 ವರ್ಷಗಳಿಂದಲೂ ನೀಡಲಾಗುತ್ತಿರುವ ಅನುದಾನದಿಂದ ಅಮೆರಿಕಕ್ಕೆ ಯಾವ ಪ್ರಯೋಜನವೂ ಆಗಿಲ್ಲ. ಹೀಗಾಗಿ ಹೊಸ ಕ್ರಮಗಳತ್ತ ಅಮೆರಿಕ ಎದುರು ನೋಡುತ್ತಿದೆ. ಶೀಘ್ರದಲ್ಲೇ ಈ ಕ್ರಮಗಳಿಗೆ ಅಂತಿಮ ರೂಪ ಸಿಗಲಿದೆ ಎಂದು ಹೇಳಲಾಗಿದೆ.
ಪಾಕಿಸ್ಥಾನದ ಮೇಲೆ ಅಮೆರಿಕ ಹೇರುತ್ತಿ ರುವ ಒತ್ತಡದಿಂದ ತಾಲಿಬಾನ್ ಉಗ್ರ ಸಂಘಟನೆ ತಲೆ ಎತ್ತುವ ಆತಂಕವೂ ಎದು ರಾಗಿದೆ. ಸದ್ಯ ಅಫ್ಘಾನಿಸ್ತಾನದಲ್ಲಿ ನಡೆಯು ತ್ತಿರುವ ಹೋರಾಟದಲ್ಲಿ ತಾಲಿಬಾನ್ ಉಗ್ರರ ಬಗ್ಗೆ ಪಾಕ್ ಮೃದು ಧೋರಣೆ ಹೊಂದಿದ್ದು, ಮಾತುಕತೆಯನ್ನೂ ನಡೆಸು ತ್ತಿದೆ. ಆದರೆ ಒಂದು ವೇಳೆ ಅಮೆರಿಕದ ಸೂಚನೆಯ ಮೇರೆಗೆ ಪಾಕ್ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದರೆ ಪಾಕಿಸ್ಥಾನಕ್ಕೇ ತಾಲಿಬಾನ್ ಮುಳುವಾಗುವ ಸಾಧ್ಯತೆ ಯಿದೆ ಎನ್ನಲಾಗಿದೆ. ಅಲ್ಲದೆ ಇದು ತಾಲಿ ಬಾನ್ ಮುನ್ನೆಲೆಯಲ್ಲಿ ನಿಂತು ಪಾಕಿಸ್ಥಾನ ದಾದ್ಯಂತ ದಾಳಿ ನಡೆಸುವ ಸಾಧ್ಯತೆಗಳೂ ಇವೆ ಎಂಬ ಆತಂಕ ಎದುರಾಗಿದೆ.
Related Articles
ಭಯೋತ್ಪಾದನೆ ವಿಚಾರದಲ್ಲಿ ಒಂದು ದೇಶದ ಕಡೆಗೆ ಮಾತ್ರವೇ ಬೆರಳು ತೋರಿ ಸುವುದು ಸರಿಯಲ್ಲ. ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ಥಾನವನ್ನು ಎಳೆದು ತರುವುದಕ್ಕೆ ನಮ್ಮ ವಿರೋಧವಿದೆ…! ಹೀಗಂತ ಹೇಳಿದ್ದು ಪಾಕಿಸ್ಥಾನದ ಮಿತ್ರ ರಾಷ್ಟ್ರ ಚೀನ. ಜಾಗತಿಕ ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಪಾಕ್ ಹಲವು ತ್ಯಾಗಗಳನ್ನು ಮಾಡಿದೆ. ಪರಸ್ಪರರ ಮೇಲೆ ಹೊಣೆ ಹೊರಿಸುವುದರ ಬದಲಿಗೆ ಒಟ್ಟಾಗಿ ಜವಾಬ್ದಾರಿ ಹೊರಬೇಕಿದೆ ಎಂದಿದೆ ಚೀನ.
Advertisement