ಅಹಮದಾಬಾದ್: ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ವಿಶೇಷ ವಿಮಾನದಲ್ಲಿ ಸೋಮವಾರ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
Advertisement
ಭಾರತಕ್ಕೆ ಚೊಚ್ಚಲ ಭೇಟಿ ನೀಡುತ್ತಿರುವ ಡೊನಾಲ್ಡ್ ಟ್ರಂಪ್ ದಂಪತಿ ಹಾಗೂ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ರೋಬರ್ಟ್ ಒಬ್ರೇಯಾನ್, ವಿತ್ತ ಕಾರ್ಯದರ್ಶಿ ವಿಲ್ಬುರ್ ರೋಸ್, ಇಂಧನ ಕಾರ್ಯದರ್ಶಿ ದಾನ್ ಬ್ರೌಲೆಟ್ಟೆ ಸೇರಿದಂತೆ 12 ಮಂದಿ ನಿಯೋಗ ಏರ್ ಫೋರ್ಸ್ 1 ವಿಮಾನದಲ್ಲಿ ಅಹಮದಾಬಾದ್ ಗೆ ಬಂದಿಳಿದೆ.
ಟ್ರಂಪ್ ದಂಪತಿಯನ್ನು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ಮೋದಿಗೆ ಟ್ರಂಪ್ ಅಪ್ಪುಗೆಯ ಸ್ವಾಗತ.