Advertisement

USA ಅಧ್ಯಕ್ಷೀಯ ಚುನಾವಣೆ: ಜನರ ಫೇವರೇಟ್‌- ವಿವೇಕ್‌ ರಾಮಸ್ವಾಮಿಗೆ 2ನೇ ಸ್ಥಾನ

10:40 PM Sep 21, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರೇಸ್‌ನಲ್ಲಿರುವ ಅಭ್ಯರ್ಥಿಗಳ ಪೈಕಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗಲೂ ಜನರ ಫೇವರೇಟ್‌ ಆಗಿ ಮುಂದುವರಿದಿದ್ದು, ಭಾರತೀಯ ಮೂಲದ ವಿವೇಕ್‌ ರಾಮಸ್ವಾಮಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಸಿಎನ್‌ಎನ್‌ ಮತ್ತು ನ್ಯೂ ಹ್ಯಾಂಪ್‌ಶೈರ್‌ ವಿಶ್ವವಿದ್ಯಾಲಯ ನಡೆಸಿರುವ ಜಂಟಿ ಸಮೀಕ್ಷೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.

Advertisement

ಸಮೀಕ್ಷೆಯ ಪ್ರಕಾರ, ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಗಳ ಪೈಕಿ ಡೊನಾಲ್ಡ್‌ ಟ್ರಂಪ್‌ ಅವರು ಜನರ ಮೊದಲ ಆಯ್ಕೆ ಆಗಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.39ರಷ್ಟು ಜನರು ಟ್ರಂಪ್‌ ಅವರನ್ನು ಅಮೆರಿಕ ಅಧ್ಯಕ್ಷ ಹುದ್ದೆಯಲ್ಲಿ ಕಾಣಲು ಬಯಸಿದ್ದಾರೆ. ಅದೇ ರೀತಿ ವಿವೇಕ್‌ ರಾಮಸ್ವಾಮಿ ಅವರ ಪರವಾಗಿ ಶೇ.13ರಷ್ಟು ಮಂದಿ, ದಕ್ಷಿಣ ಕೊರೊಲಿನಾ ಮಾಜಿ ರಾಜ್ಯಪಾಲೆ, ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಅವರನ್ನು ಶೇ.12ರಷ್ಟು ಮಂದಿ ಬೆಂಬಲಿಸಿದ್ದಾರೆ. ಅದೇ ರೀತಿ ನ್ಯೂ ಜೆರ್ಸಿ ಮಾಜಿ ರಾಜ್ಯಪಾಲೆ ಕ್ರಿಸ್‌ ಕ್ರಿಸ್ಟಿ ಅವರಿಗೆ ಶೇ.11ರಷ್ಟು ಜನರು ಬೆಂಬಲ ಸೂಚಿಸಿದ್ದಾರೆ.

ಟ್ರಂಪ್‌ ಮಗನ ಖಾತೆ ಹ್ಯಾಕ್‌:
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರ ಡೊನಾಲ್ಡ್‌ ಟ್ರಂಪ್‌ ಜೂನಿಯರ್‌ ಅವರ ಟ್ವಿಟರ್‌ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್‌ ಮಾಡಿದ್ದಾರೆ. “ನನ್ನ ತಂದೆ ಡೊನಾಲ್ಡ್‌ ಟ್ರಂಪ್‌ ಮೃತಪಟ್ಟಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇನೆ. ಹೀಗಾಗಿ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ’ ಎಂದು ಅವರ ಖಾತೆಯಲ್ಲಿ ಹ್ಯಾಕರ್‌ಗಳು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next