Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಂಟು ತಿಂಗಳಲ್ಲಿ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ನಡೆಯುತ್ತಿರುವ ಐದನೇ ಮಾತುಕತೆ ಇದಾಗಿದೆ ಎಂದು ಹೇಳಿದರು.
Related Articles
Advertisement
ನಂತರ ಇಬ್ಬರು ನಾಯಕರು ಮೋಟೆರಾ ಸ್ಟೇಡಿಯಂನಿಂದ ರೋಡ್ ಶೋ ನಡೆಸಲಿದ್ದಾರೆ. ನಂತರ ಸಾಬರ್ ಮತಿ ಆಶ್ರಮದ ಬಳಿ ರೋಡ್ ಶೋ ಅಂತ್ಯಗೊಳ್ಳಲಿದೆ. ಆಶ್ರಮದಲ್ಲಿ 15 ನಿಮಿಷಗಳ ಕಾಲ ಕಳೆಯಲಿದ್ದಾರೆ.
ನಂತರ ನೂತನವಾಗಿ ನಿರ್ಮಿಸಲ್ಪಟ್ಟ ಮೋಟೆರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಎಂಬ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಂದಾಜು 1.10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಪ್ರಧಾನಿ ಮೋದಿ ಹಾಗೂ ಟ್ರಂಪ್ 12.30ಕ್ಕೆ ಮೈದಾನಕ್ಕೆ ಆಗಮಿಸಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಕಳೆದ ವರ್ಷ ಅಮೆರಿಕದ ಹೂಸ್ಟನ್ ನಲ್ಲಿ ಆಯೋಜಿಸಿದ್ದ ಹೌಡಿ ಮೋದಿ ಕಾರ್ಯಕ್ರಮದಂತೆ ಇರಲಿದೆ ಎಂದು ಹರ್ಷವರ್ಧನ್ ವಿವರಿಸಿದರು.
ಮಧ್ಯಾಹ್ನ 3.30ಕ್ಕೆ ಟ್ರಂಪ್ ಮತ್ತು ಮೆಲಾನಿಯಾ ಆಗ್ರಾಕ್ಕೆ ಹೊರಡಲಿದ್ದು, ಸಂಜೆ 5ಗಂಟೆಗೆ ತಲುಪಲಿದ್ದಾರೆ. ಅಲ್ಲಿಂದ ದಿಲ್ಲಿಗೆ ಬಂದು ರಾತ್ರಿ ಐಟಿಸಿ ಮೌರ್ಯ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಫೆಬ್ರವರಿ 25ರಂದು ಬೆಳಗ್ಗೆ 10ರಿಂದ 1045ರವರೆಗೆ ರಾಷ್ಟ್ರಪತಿ ಭವನದಲ್ಲಿ ಆತಿಥ್ಯ. ಟ್ರಂಪ್ ಮತ್ತು ಮೆಲಾನಿಯಾ ಈ ವೇಳೆ ರಾಜ್ ಘಾಟ್ ಗೂ ಭೇಟಿ ನೀಡಲಿದ್ದಾರೆ. ಮಾತುಕತೆ ನಂತರ 11.30ಕ್ಕೆ ಹೈದರಾಬಾದ್ ಹೌಸ್ ನಲ್ಲಿ ಜಂಟಿಯಾಗಿ ಪತ್ರಿಕಾಗೋಷ್ಠಿ. ಮಧ್ಯಾಹ್ನ 3ಗಂಟೆಗೆ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಸಿಇಒಗಳ ಜತೆ ರೌಂಡ್ ಟೇಬಲ್ ಮಾತುಕತೆ. ಇದು ಭಾರತ ಭೇಟಿ ಕೊನೆಯ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.