Advertisement

ವಿಶ್ವ ಆರೋಗ್ಯ ಸಂಸ್ಥೆಗೆ ಫ‌ಂಡ್‌ ಕೊಡಲ್ಲ: WHO ಚೀನಾ ಓಲೈಕೆ ನೀತಿಗೆ ಟ್ರಂಪ್ ಕಿಡಿ!

05:05 PM Apr 09, 2020 | Hari Prasad |

ವಾಷಿಂಗ್ಟನ್: ಮೊನ್ನೆ ಮೊನ್ನೆಯಷ್ಟೇ ಹೈಡ್ರೋಕ್ಸಿಕ್ಲೋರೋಕ್ವಿನ್‌ ಮಾತ್ರ ಪೂರೈಕೆ ವಿಚಾರದಲ್ಲಿ ಭಾರತದ ವಿರುದ್ಧ ಹುಸಿ ಮುನಿಸು ತೋರಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಿಟ್ಟಿನ ಕಣ್ಣು ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ಮೇಲೆ ಬಿದ್ದಿದೆ. ಡಬ್ಲ್ಯು.ಹೆಚ್.ಒ. ಮೇಲೆ ಟ್ರಂಪ್ ಮುನಿಸಿಕೊಳ್ಳಲು ಕಾರಣ

Advertisement

ವಿಶ್ವ ಆರೋಗ್ಯ ಸಂಸ್ಥೆ ಚೀನ ಕೇಂದ್ರಿತವಾಗಿರುವ ತನ್ನ ನೀತಿಯನ್ನು ಕೈಬಿಡಬೇಕು. ಇಲ್ಲದಿದ್ದರೆ ಅಮೆರಿಕದಿಂದ ನೀಡುತ್ತಿರುವ ದೊಡ್ಡ ಮೊತ್ತದ ಧನ ಸಹಾಯವನ್ನು ನಿಲ್ಲಿಸುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಕೇವಲ ಚೀನವನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡುತ್ತಿದ್ದು, ಸೋಂಕಿತರು ಹೆಚ್ಚಾಗಿರುವ ಅಮೆರಿಕವನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಡಬ್ಲ್ಯೂ.ಎಚ್‌.ಒ.ಗೆ ಅಮೆರಿಕ ನೀಡುತ್ತಿರುವ ಹಣಕಾಸಿನ ನೆರವನ್ನು ಕೂಡಲೆ ನಿಲ್ಲಿಸಲಾಗುವುದು. ಆ ಅನಂತರವೂ ಸಂಸ್ಥೆ ತನ್ನ ತಪ್ಪು ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ನೇರವಾಗಿ ಬೆದರಿಕೆ ಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಸೆನೆಟ್‌ನ ವಿದೇಶಾಂಗ ಸಂಬಂಧಗಳ ಸಮಿತಿಯ ಮುಖ್ಯಸ್ಥ ಜಿಮ್‌ ರಿಸ್ಕ್, ಕೋವಿಡ್ ವೈರಸ್‌ ಸೋಂಕಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಅಮೆರಿಕಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ದ್ರೋಹವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next