ವಾಷಿಂಗ್ಟನ್: ಚೀನಾ ಕೋವಿಡ್-19 ಕುರಿತ ಅಧಿಕೃತ ಅಂಕಿ ಅಂಶಗಳನ್ನು ಮರೆಮಾಚಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಆ ಮೂಲಕ ಹಲವು ಅಮೆರಿಕಾದ ಪ್ರಮುಖ ವ್ಯಕ್ತಿಗಳು ಬೀಜಿಂಗ್ ನೀಡಿದ ವರದಿಗಳ ನಿಖರತೆಯನ್ನು ಪ್ರಶ್ನಿಸಿದ್ದಾರೆ.
ಚೀನಾ ಜಗತ್ತಿಗೆ ತಿಳಿಸಿರುವ ಕೋವಿಡ್- 19 ಸಾವಿನ ಸಂಖ್ಯೆ ಮತ್ತು ಸೋಂಕಿತರ ಪ್ರಮಾಣಗಳ ಅಂಕಿಅಂಶಗಳು ನಿಖರವಾಗಿದೆಯೇ ಎಂದು ಹೇಗೆ ನಂಬುವುದು ? ಅವರ ನೀಡಿದ ಮಾಹಿತಿ ಅನುಮಾನ ಹುಟ್ಟಿಸುವಂತಿದೆ. ಅದಾಗ್ಯೂ ಚೀನಾದೊಂದಿಗೆ, ವಾಷಿಂಗ್ಟನ್ ಸಂಬಂಧ ಉತ್ತಮವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಆದರೆ ಚೀನಾವು ಬೇರೆ ರೀತಿಯ ಆರೋಪ ಹೊರಿಸಿದ್ದು ಚೀನಾದಲ್ಲಿ ವೈರಸ್ ಹರಡಲು ಅಮೆರಿಕಾ ಮಿಲಿಟರಿ ಪ್ರಮುಖ ಕಾರಣ ಎಂದು ಆರೋಪಿಸಿದೆ. ಇದು ಎರಡು ದೇಶಗಳ ಮಧ್ಯೆ ಮಾತಿನ ಸಮರ ನಡೆಯಲು ಪ್ರಮುಖ ಕಾರಣವಾಗಿದೆ.
ಅಮೆರಿಕಾದ ಗುಪ್ತಚರ ವರದಿಯನ್ನು ಉಲ್ಲೇಖಿಸಿ, ರಿಪಬ್ಲಿಕನ್ ಕಾಂಗ್ರೆಸ್, ಚೀನಾ ಜಾಗತಿಕ ಸಮೂದಾಯವನ್ನು ದಾರಿ ತಪ್ಪಿಸುತ್ತಿದೆ. ಸೋಂಕಿತರ ಸಂಖ್ಯೆ ಮತ್ತು ಸಾವನ್ನಪ್ಪಿದವರ ನಿಖರ ಮಾಹಿತಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.
ಚೀನಾದಲ್ಲಿ ಕೋವಿಡ್ -19 ವೈರಸ್ ಗೆ 3,316 ಜನರತು ಬಲಿಯಾಗಿದ್ದು ಸೋಂಕಿತರ ಸಂಖ್ಯೆ 82,361 ಎಂದು ವರದಿ ತಿಳಿಸಿದೆ. ಆದರೆ ಅಮೆರಿಕಾದಲ್ಲಿ 2 ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದು, 4,000ಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ.