Advertisement

ಪಾಕಿಸ್ಥಾನ ಅವ್ಯವಸ್ಥೆಯ ದಲ್ಲಾಳಿ:ಮತ್ತೆ ಕೆಂಡಕಾರಿದ ಟ್ರಂಪ್‌ 

09:30 AM Aug 22, 2017 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ  ಡೊನಾಲ್ಡ್‌ ಟ್ರಂಪ್‌ ಅವರು ಮತ್ತೆ ಪಾಕಿಸ್ಥಾನದ ಉಗ್ರವಾದದ ಪರ ನಿಲುವಿಗಾಗಿ ಕೆಂಡಕಾರಿದ್ದು, ‘ವಾಷಿಂಗ್ಟನ್‌ ಎಂದಿಗೂ ತಾಲಿಬಾನ್‌ಗೆ ಬೆಂಬಲ ನೀಡುವವರ ಪರ ನಿಲ್ಲದು’ ಎಂದಿದ್ದಾರೆ.

Advertisement

ಸೋಮವಾರ ಬಹುನಿರೀಕ್ಷಿತ ಅಫ್ಘಾನಿಸ್ಥಾನದ ಕುರಿತಾಗಿ ತಂತ್ರಗಾರಿಕೆಯನ್ನು ಅನಾವರಣಗೊಳಿಸಿ ಮಾತನಾಡಿದ ಟ್ರಂಪ್‌ ಪಾಕ್‌ಗೆ ಇನ್ನೊಂದು ಬಾರಿ ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲದೆ ಯುದ್ಧದಿಂದ ತತ್ತರಿಸಿ ಹೋಗಿರುವ ಅಫ್ಘಾನ್‌ನ ಏಳಿಗೆಗೆ ಭಾರತದ ನೆರವನ್ನೂ ಕೋರಿದ್ದಾರೆ.

‘ಪಾಕ್‌ ಉಗ್ರರರಿಗೆ ಸುರಕ್ಷಿತ ಸ್ವರ್ಗ’ ಎಂದು ಪುನರುಚ್ಚರಿಸಿದ ಟ್ರಂಪ್‌ ಪಾಕ್‌ ‘ಅವ್ಯವಸ್ಥೆಯ ದಲ್ಲಾಳಿ’ ಎಂದು ಕಿಡಿ ಕಾರಿದರು. ‘ಕ್ರಿಮಿನಲ್‌ಗ‌ಳು ಮತ್ತು ಉಗ್ರರಿಗೆ ಬೆಂಬಲ ನೀಡುವ ಮೂಲಕ ದೇಶ ಇನ್ನಷ್ಟು ಕಳೆದುಕೊಳ್ಳುವುದಕ್ಕಿದೆ’ ಎಂದರು. 

‘ಅಫ್ಘಾನಿಸ್ಥಾನದಲ್ಲಿ ನಮ್ಮ ಪಾಲುದಾರಿಕೆಯೊಂದಿಗೆ ಕೈಜೋಡಿಸಿದರೆ ಪಾಕಿಸ್ಥಾನ ಇನ್ನಷ್ಟು ಲಾಭ ಪಡೆಯಲಿದೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next