Advertisement
ಜಪಾನ್‌ನ ಒಸಾಕಾದಲ್ಲಿ ಶನಿವಾರ ಜಿ20 ಶೃಂಗ ಮುಕ್ತಾಯವಾಗುತ್ತಿದ್ದಂತೆ, ನಾನು ದಕ್ಷಿಣ ಕೊರಿಯಾಗೆ ತೆರಳುತ್ತಿದ್ದೇನೆ. ಸಾಧ್ಯವಾದರೆ ಒಮ್ಮೆ ಗಡಿ ಭಾಗದಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್‌ರನ್ನು ಭೇಟಿ ಮಾಡಬಹುದು ಎಂದು ಶನಿವಾರ ಟ್ರಂಪ್ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರ ಕೊರಿಯಾ ಧನಾತ್ಮಕವಾಗಿ ಪ್ರತಿಕ್ರಿಯಿಸಿತ್ತು. ಹೀಗಾಗಿ ರವಿವಾರ ಇಬ್ಬರೂ ಮುಖಂಡರು ಗಡಿಯಲ್ಲಿ ಭೇಟಿ ಮಾಡಿದ್ದಾರೆ.
Related Articles
Advertisement
ಡಿಎಂಝಡ್‌ನಲ್ಲಿ ನಡೆದಿದ್ದೇನು?: ಡಿಎಂಝಡ್‌ಗೆ ಇಬ್ಬರೂ ಮುಖಂಡರು ಆಗಮಿಸುತ್ತಿದ್ದಂತೆಯೇ ಇಬ್ಬರೂ ಕೈ ಕುಲುಕಿ ದುಬಾಷಿಯ ನೆರವಿನಿಂದ ಉಭಯಕುಶಲೋಪರಿ ನಡೆಸಿದರು. ನಿಮ್ಮನ್ನು ಪುನಃ ಭೇಟಿ ಮಾಡಿದ್ದು ಸಂತಸವಾಯಿತು. ಈ ಸ್ಥಳದಲ್ಲಿ ನಿಮ್ಮನ್ನು ಭೇಟಿ ಮಾಡಲು ನಾನು ನಿರೀಕ್ಷಿಸಿದ್ದೆ ಎಂದು ಟ್ರಂಪ್ ಹೇಳಿದರು. ಅಲ್ಲದೆ, ಉತ್ತರ ಕೊರಿಯಾದ ಭೂಪ್ರದೇಶಕ್ಕೂ ತೆರಳಿದ್ದರು. ಈ ಇಡೀ ಸನ್ನಿವೇಶವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ನೇರ ಪ್ರಸಾರ ಮಾಡಿದ್ದವು.ಆರಂಭದಲ್ಲಿ ಇದೊಂದು ಹಠಾತ್ ಭೇಟಿಯಾಗಿ ತ್ತಾದರೂ, ಅನಂತರ ಇದು ಸುದೀರ್ಘ ಭೇಟಿಯಾ ಗಿಯೇ ಪರಿವರ್ತನೆ ಯಾಯಿತು. ಡಿಎಂಝಡ್‌ನಲ್ಲಿ ಕೈಕುಲುಕಿದ ಅನಂತರ ಇಬ್ಬರೂ ದಕ್ಷಿಣ ಕೊರಿಯಾದ ಪನ್ಮುಂಜೋಮ್‌ಗೆ ಆಗಮಿಸಿದರು. ಇಲ್ಲಿನ ಫ್ರೀಡಮ್ ಹೌಸ್‌ನಲ್ಲಿ ಒಂದು ಗಂಟೆ ಕಾಲ ಮಾತನಾಡಿದರು. ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಕೂಡ ಇವರೊಂದಿಗೆ ಸೇರಿಕೊಂಡಿದ್ದರು. ಶ್ವೇತಭವನಕ್ಕೆ ಬನ್ನಿ…
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್‌ರನ್ನು ಟ್ರಂಪ್ ಶ್ವೇತಭವನಕ್ಕೆ ಆಹ್ವಾನಿಸಿದ್ದಾರೆ. ಯಾವುದೇ ಸಮಯ ದಲ್ಲೂ ನೀವು ಶ್ವೇತಭವನಕ್ಕೆ ಆಗಮಿಸಬಹುದು ಎಂದು ಟ್ರಂಪ್ ಹೇಳಿದ್ದಾರೆ. ಯಾವ ದೇಶದ್ದೂ ಅಲ್ಲದ ಸ್ಥಳದಲ್ಲಿ ಭೇಟಿ!
ಟ್ರಂಪ್ ಮತ್ತು ಕಿಮ್ ಭೇಟಿ ಮಾಡಿದ್ದು ದಕ್ಷಿಣ ಮತ್ತು ಉತ್ತರ ಕೊರಿಯಾದ್ದಲ್ಲದ, ಆದರೆ ಈ ಎರಡೂ ದೇಶಗಳ ಮಧ್ಯದಲ್ಲಿರುವ ಪ್ರದೇಶದಲ್ಲಿ ! ಇದನ್ನು ಡಿಮಿಲಿಟರೈಸ್ಡ್ ಝೋನ್ (ಸೇನಾಮುಕ್ತ ವಲಯ) ಎಂದು ಕರೆಯಲಾಗುತ್ತದೆ. 1953ರಲ್ಲಿ ದಕ್ಷಿಣ ಮತ್ತು ಉತ್ತರ ಕೊರಿಯಾ ಮಧ್ಯೆ ನಡೆದ ಯುದ್ಧದಲ್ಲಿ ಈ 248 ಕಿ.ಮೀ. ಉದ್ದದ, 4 ಕಿ.ಮೀ. ಅಗಲದ ಪ್ರದೇಶವನ್ನು ಸೇನಾಮುಕ್ತ ವಲಯ ಎಂದು ಘೋಷಿಸಲಾಯಿತು. ಇಲ್ಲಿ ವಿಶ್ವಸಂಸ್ಥೆ ಹಾಗೂ ಉತ್ತರ ಕೊರಿಯಾದ ಆಡಳಿತವಿದೆ. ಆದರೆ ಇದು ಸೇನಾಮುಕ್ತ ಎಂದು ಹೆಸರಿನಲ್ಲಷ್ಟೇ ಇದ್ದು, ಯುದ್ಧದ ಅನಂತರದಲ್ಲಿ ಹಲವು ಬಾರಿ ಉಭಯ ದೇಶಗಳ ಸೇನೆ ಪರಸ್ಪರ ದಾಳಿ ನಡೆಸಿವೆ. ಈ ಭಾಗದಲ್ಲಿನ ಸಾವಿರಾರು ಜನರು ದಕ್ಷಿಣ ಕೊರಿಯಾಗೆ ಉದ್ಯೋಗ ಹಾಗೂ ಉತ್ತಮ ಜೀವನವನ್ನು ಅರಸಿಕೊಂಡು ಗುಳೆ ಹೋಗಿದ್ದಾರೆ. ಮೊದಲೂ ನಡೆದಿತ್ತು ಭೇಟಿ
ಈ ಹಿಂದೆ ಅಮೆರಿಕದ ಹಲವು ಅಧ್ಯಕ್ಷರು ಈ ಭಾಗಕ್ಕೆ ಭೇಟಿ ನೀಡಿದ್ದರು. ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಡಿಎಂಝಡ್‌ಗೆ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ, ಬೈನಾಕ್ಯುಲರ್ ಹಿಡಿದು ತೆರಳಿದ್ದರು. ಇನ್ನು ಜಿಮ್ಮಿ ಕಾರ್ಟರ್ ಮತ್ತು ಬಿಲ್ ಕ್ಲಿಂಟನ್ ಅಂತೂ ಉತ್ತರ ಕೊರಿಯಾದ ರಾಜಧಾನಿ ಪೊÂàಂಗ್ಯೋಂಗ್‌ಗೇ ಭೇಟಿ ನೀಡಿದ್ದರು. ಆದರೆ ಇವರಿಬ್ಬರೂ ಅಧಿಕಾರ ತೊರೆದ ಅನಂತರವೇ ಅಲ್ಲಿಗೆ ತೆರಳಿದ್ದರು!