Advertisement

ತಾತ್ಕಾಲಿಕ ಆಸ್ಪತ್ರೆಯಾಗಿ ಮಾರ್ಪಾಡಾದ ಯುಎಸ್‌ ಓಪನ್‌ ತಾಣ

09:29 AM Apr 02, 2020 | sudhir |

ನ್ಯೂಯಾರ್ಕ್‌: ಕೋವಿಡ್ 19 ವೈರಸ್‌ ವೇಗವಾಗಿ ವ್ಯಾಪಿಸುತ್ತಿರುವುದರಿಂದ ನ್ಯೂಯಾರ್ಕ್‌ ಸಹಿತ ಅಮೆರಿಕದಲ್ಲಿ ಸೋಂಕಿನ ರೋಗಿಗಳನ್ನು ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲು ಸ್ಥಳದ ಕೊರತೆ ಕಾಣುತ್ತಿದೆ. ಹೀಗಾಗಿ ಲಭ್ಯವಿರುವ ತಾಣಗಳನ್ನು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಮಾರ್ಪಾಡು ಮಾಡಲಾಗುತ್ತದೆ.

Advertisement

ಕೊರೊನಾದಿಂದಾಗಿ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ ಯುಎಸ್‌ ಓಪನ್‌ ನಡೆಯುವ ಬಿಲ್ಲಿ ಜೀನ್‌ ಕಿಂಗ್‌ ರಾಷ್ಟ್ರೀಯ ಟೆನಿಸ್‌ ಸೆಂಟರ್‌ನ ಒಂದು ಭಾಗದಲ್ಲಿ 350 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ ಎಂದು ಯುಎಸ್‌ ಟೆನಿಸ್‌ ಅಸೋಸಿಯೇಶನ್‌ (ಯುಎಸ್‌ಟಿಎ) ತಿಳಿಸಿದೆ. ಕೊರೊನಾದಿಂದ ನ್ಯೂಯಾರ್ಕ್‌ ನಗರ ಬಹಳಷ್ಟು ತೊಂದರೆ ಅನುಭವಿಸುತ್ತಿದೆ.

ಒಳಾಂಗಣ ಟೆನಿಸ್‌ ಸೌಕರ್ಯವನ್ನು ಆಸ್ಪತ್ರೆಯನ್ನಾಗಿ ಬದಲಿಸುವ ಕಾರ್ಯ ಮಂಗಳವಾರದಿಂದ ಆರಂಭ ವಾಗಿದೆ. ನಾವು ಎಲ್ಲ ರೀತಿಯ ಸಹಾಯ ಮಾಡಲು ಸಿದ್ದರಿದ್ದೇವೆ. ನೂಯಾರ್ಕ್‌ ನಮ್ಮ ಮನೆ ಇದ್ದಂತೆ. ನಾವೆಲ್ಲ ಈ ಮನೆಯ ಸದಸ್ಯರು ಎಂದು ಯುಎಸ್‌ಟಿಎ ವಕ್ತಾರ ಕ್ರಿಸ್‌ ವಿಡ್‌ಮೈರ್‌ ಹೇಳಿದ್ದಾರೆ.

ವೈದ್ಯಕೀಯ ಆರೈಕೆ ತಾಣ
ಟೆನಿಸ್‌ ಕೇಂದ್ರವನ್ನುಸಹಾಯಕ ವೈದ್ಯಕೀಯ ಆರೈಕೆ ತಾಣವಾಗಿ ಬಳಸಿಕೊಳ್ಳಲಾಗುತ್ತದೆ. ಇಲ್ಲಿ ಕೋವಿಡ್‌ ರಹಿತ ರೋಗಿಗಳನ್ನು ನೋಡಿಕೊಳ್ಳಲಾಗುತ್ತದೆ. ಅಗತ್ಯ ಬಿದ್ದರೆ ಕೋವಿಡ್‌ ರೋಗಿಗಳನ್ನು ಕೂಡ ದಾಖಲಿಸಿಕೊಳ್ಳಲಾಗುವುದು ಎಂದು ನ್ಯೂಯಾರ್ಕ್‌ ನಗರ ತುರ್ತು ಆಡಳಿತದ ವಕ್ತಾರ ಒಮರ್‌ ಬೋರ್ನ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next