Advertisement
“ಆರ್ಥರ್ ಆ್ಯಶ್ ಸ್ಟೇಡಿಯಂ’ನಲ್ಲಿ ನಡೆದ ಬಾರ್ಟಿ ಎದುರಿನ 3ನೇ ಸುತ್ತಿನ ಮುಖಾಮುಖೀಯನ್ನು 6-2, 1-6, 7-6 (5)ರಿಂದ ಗೆದ್ದ ಶೆಲ್ಬಿ ಅಮೆರಿಕ ಪಾಲಿನ ನೂತನ ಆಶಾಕಿರಣವಾಗಿ ಮೂಡಿಬಂದರು. ಇವರ ಮುಂದಿನ ಎದುರಾಳಿ ಬ್ರಿಟನ್ನಿನ ಎಮ್ಮಾ ರ್ಯಾಡುಕಾನು. ಒಂದು ದಿನದ ಹಿಂದಷ್ಟೇ ಹಾಲಿ ಚಾಂಪಿಯನ್ ನವೋಮಿ ಒಸಾಕಾಗೆ ಲೇಲಾ ಫೆರ್ನಾಂಡಿಸ್ ಆಘಾತವಿಕ್ಕಿದ್ದರು. ಹೀಗಾಗಿ ವನಿತಾ ಸಿಂಗಲ್ಸ್ ವಿಭಾಗವೀಗ ಮುಕ್ತಗೊಂಡಿದೆ.
Related Articles
Advertisement
ಜೊಕೋ 4 ಸೆಟ್ ಹೋರಾಟ :
ಇದೇ ಮೊದಲ ಸಲ ಯುಎಸ್ ಓಪನ್ ಆಡುತ್ತಿರುವ ಆಟಗಾರರನ್ನು ಮೊದಲೆರಡು ಸುತ್ತುಗಳಲ್ಲಿ ಸೋಲಿಸಿದ್ದ ನಂ.1 ನೊವಾಕ್ ಜೊಕೋವಿಕ್ 3ನೇ ಸುತ್ತು ದಾಟಿ ಮುಂದುವರಿದಿದ್ದಾರೆ. ಇಲ್ಲಿ ಅವರು ಜಪಾನಿನ ಕೀ ನಿಶಿಕೊರಿ ವಿರುದ್ಧ 4 ಸೆಟ್ ಹೋರಾಟ ನಡೆಸಿ ಗೆದ್ದು ಬಂದರು. ಅಂತರ 6-7 (4), 6-3, 6-3, 6-2. ಮುಂದಿನ ಎದುರಾಳಿ ಅಮೆರಿಕದ ಜೆನ್ಸನ್.
ಶಪೊವಲೋವ್ ಶರಣು :
ಇದೇ ವೇಳೆ ದಕ್ಷಿಣ ಆಫ್ರಿಕಾದ ಲಾಯ್ಡ ಹ್ಯಾರಿಸ್ ಅಮೋಘ ಸಾಧನೆಯ ಮೂಲಕ ಮೊದಲ ಸಲ ಗ್ರ್ಯಾನ್‌ಸ್ಲಾಮ್ 4ನೇ ಸುತ್ತಿಗೆ ಏರಿದರು. ಅವರು ಕೆನಡಾದ ಡೆನ್ನಿಸ್ ಶಪೊವಲೋವ್‌ಗೆ 6-4, 6-4, 6-4 ನೇರ ಸೆಟ್‌ಗಳ ಆಘಾತವಿಕ್ಕಿದರು.
4ನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ 4ನೇ ಸುತ್ತು ತಲುಪಿದ್ದಾರೆ. ಎದುರಾಳಿ ಜಾಕ್ ಸಾಕ್ 4ನೇ ಸೆಟ್ ವೇಳೆ ಗಾಯಾಳಾದ ಕಾರಣ ಹಿಂದೆ ಸರಿದರು.
ವಿಂಬಲ್ಡನ್ ರನ್ನರ್ಅಪ್ ಇಟಲಿಯ ಮ್ಯಾಟಿಯೊ ಬೆರೆಟಿನಿ 5 ಸೆಟ್‌ಗಳ ಥ್ರಿಲ್ಲರ್‌ನಲ್ಲಿ ಬೆಲರೂಸ್‌ನ ಇಲ್ಯ ಇವಾಷ್ಕ ಸವಾಲನ್ನು ಮೆಟ್ಟಿನಿಂತರು.