ನ್ಯೂಯಾರ್ಕ್: ಯುಎಸ್ ಓಪನ್ ವನಿತಾ ಸಿಂಗಲ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. ವಿಶªದ ನಂಬರ್ ವನ್ ಆಟಗಾರ್ತಿ, ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಮತ್ತು ಟ್ಯುನೀಶಿಯಾದ ಓನ್ಸ್ ಜೆಬ್ಯೂರ್ ಪ್ರಶಸ್ತಿ ಸೆಣಸಾಟಕ್ಕೆ ಅಣಿ ಯಾಗಿದ್ದಾರೆ.
ಇಬ್ಬರಿಗೂ ಇದು ಮೊದಲ ಯುಎಸ್ ಓಪನ್ ಫೈನಲ್ ಆದ್ದರಿಂದ ನ್ಯೂಯಾರ್ಕ್‌ನಲ್ಲಿ ನೂತನ ಚಾಂಪಿ ಯನ್ ಒಬ್ಬರ ಉದಯವಾಗಲಿದೆ.
ಸೆಮಿಫೈನಲ್ ಹಣಾಹಣಿಯಲ್ಲಿ ಐಗಾ ಸ್ವಿಯಾಟೆಕ್ ಬೆಲರೂಸ್‌ನ ಅರಿನಾ ಸಬಲೆಂಕಾ ವಿರುದ್ಧ ಮೊದಲ ಸೆಟ್ ಕಳೆದುಕೊಂಡೂ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಗೆಲುವಿನ ಅಂತರ 3-6, 6-1, 6-4. ಪೋಲೆಂಡ್ ಆಟಗಾರ್ತಿಯೊಬ್ಬರು ಯುಎಸ್ ಓಪನ್ ಫೈನಲ್ ತಲುಪಿದ ಮೊದಲ ನಿದರ್ಶನ ಇದಾಗಿದೆ.
ಇನ್ನೊಂದು ಸೆಮಿ ಸೆಣಸಾಟದಲ್ಲಿ ಓನ್ಸ್ ಜೆಬ್ಯೂರ್ ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ ವಿರುದ್ಧ 6-1, 6-3 ಅಂತರದ ನೇರ ಸೆಟ್ ಜಯ ಸಾಧಿಸಿದರು.
ಐಗಾ ಸ್ವಿಯಾಟೆಕ್ ಈಗಾಗಲೇ ಎರಡು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ. ಎರಡು ಕೂಡ ಫ್ರೆಂಚ್ ಓಪನ್ ಟ್ರೋಫಿಗಳೇ ಆಗಿವೆ. 2020ರಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್ ಗೆದ್ದ ಸ್ವಿಯಾಟೆಕ್, ಈ ವರ್ಷದ ಪ್ಯಾರಿಸ್ ಕ್ವೀನ್ ಕೂಡ ಆಗಿದ್ದಾರೆ.
ಅರಬ್ ಮೂಲದ ಓನ್ಸ್ ಜೆಬ್ಯೂರ್ ಈವರೆಗೆ ಯಾವುದೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿಲ್ಲ. ಆದರೆ ಸತತ 2 ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಲಗ್ಗೆಯಿಟ್ಟ ಹಿರಿಮೆ ಇವರದು. ಕಳೆದ ವಿಂಬಲ್ಡನ್ ಟೂರ್ನಿಯಲ್ಲೂ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದ್ದರೂ ಅಲ್ಲಿ ಎಲೆನಾ ರಿಬಾಕಿನಾ ಅವರಿಗೆ 6-3, 2-6, 2-6ರಿಂದ ಶರಣಾಗಿದ್ದರು.
ನ್ಯೂಯಾರ್ಕ್‌ನಲ್ಲಿ ಜೆಬ್ಯೂರ್‌ಗೆ ಅದೃಷ್ಟ ಒಲಿದೀತೇ ಎಂಬುದನ್ನು ಕಾದು ನೋಡಬೇಕು.ಫೈನಲ್ ಮುಖಾಮುಖಿ ಶನಿವಾರ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ರವಿವಾರ 1.30ಕ್ಕೆ ಆರಂಭವಾಗಲಿದೆ.